ಹರಿಹರ, ಅ. 28 – ತಾಲ್ಲೂಕು ಮಡಿವಾಳ ಮಾಚಿದೇವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮನ ಮನೆಗೆ ಮಾಚಿದೇವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳನ್ನು ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ಈ ವೇಳೆ ಮೆರವಣಿಗೆ ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಮಹಿಳೆಯರ ಕುಂಭಮೇಳದೊಂದಿಗೆ ಆರಂಭಗೊಂಡು ಕಾಟ್ವೆ ಭವನದಲ್ಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಮಡಿವಾಳ ಮಾಚಿದೇವ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಮಾಜದ ಮುಖಂಡರಾದ ಎಂ.ಹೆಚ್. ಭೀಮಣ್ಣ, ಎಂ.ಎನ್. ಬಸವರಾಜಪ್ಪ, ರಂಗನಾಥ ಕೊಮಾರನಹಳ್ಳಿ, ಚಂದ್ರಪ್ಪ, ಮಲ್ಲೇಶಪ್ಪ ಕುಣೆಬೆಳಕೇರಿ, ಎಂ.ಪಿ. ಈಶ್ವರ, ಅಣ್ಣಪ್ಪ ಲೋಕಿಕೇರೆ, ಪುಲಕೇಶಿ, ದೇವರಬೆಳಕೇರಿ ಮಹೇಶಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.