ತರಳಬಾಳು ಬೃಹನ್ಮಠದಿಂದ ನಗರದಲ್ಲಿ ಇಂದು ಬಸವ ಜಯಂತಿ

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು  ಬೃಹನ್ಮಠದ ವತಿಯಿಂದ ಇಂದು ಸಂಜೆ 5.30 ಕ್ಕೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ.

ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸು ವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜರ್ಮನಿಯ ಪ್ರೊ. ಗೀತಾ ಧರ್ಮಪಾಲ್, ಬೆಂಗಳೂರಿನ ಡಾ. ಸುಧಾ ಸೀತಾರಾಮನ್, ರಾಜ್ಯ ರೈತ ಸಂಘದ ಅಧ್ಯಕ್ಷರೂ, ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಧಾರ ವಾಡ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ ಆಗಮಿಸಲಿದ್ದಾರೆ.

`ಬಸವಣ್ಣನವರ ವಚನಗಳಲ್ಲಿ ಸಮಾನತೆಯ ಆಶಯಗಳು’ ಕುರಿತು ತುಮಕೂರು ಸಂಸ್ಕೃತಿ ಚಿಂತಕ ಡಾ. ನಟರಾಜ ಎಸ್. ಬೂದಾಳು ಉಪನ್ಯಾಸ ನೀಡಲಿದ್ದಾರೆ. ಪ್ರೊ. ಬಸವನಾಳ ಶಿವಲಿಂಗಪ್ಪ ಅವರ ಸಂಪಾದಕತ್ವದ `ಬಸವಣ್ಣನವರ ಷಟ್‌ಸ್ಥಲದ ವಚನಗಳು’ ಕುರಿತ ಪುಸ್ತಕ ಬಿಡುಗಡೆಯಾಗಲಿದೆ.

ಇದೇ ಸಂದರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರಿಂದ `ಶಿವಶರಣರ ವಚನ ಸಂಪುಟ’ ತಂತ್ರಾಂಶದ ಪ್ರಾತ್ಯಕ್ಷಿಕೆ  ನಡೆಸಿಕೊಡಲಿದ್ದಾರೆ.

ಸುಶ್ರಾವ್ಯ ಸಂಗೀತ ವಿದ್ಯಾಲಯದ ಯಶಾ ದಿನೇಶ್, ಹಿಂದುಸ್ಥಾನಿ ಗಾಯಕ ಆನಂದ್ ಆರ್. ಪಾಟೀಲ್ ಅವರಿಂದ ವಚನ ಗೀತೆ, ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಪ್ರೌಢಶಾಲೆಯ ಮಕ್ಕಳಿಂದ ವಚನ ನೃತ್ಯ, ನಮನ ಅಕಾಡೆಮಿಯ ಡಿ.ಕೆ. ಮಾಧವಿ, ನೂಪುರ ಕಲಾ ಸಂಸ್ಥೆಯ ಬೃಂದಾ ಅವರಿಂದ ಭರತನಾಟ್ಯ ಕಾರ್ಯಕ್ರಮ ಇರುತ್ತದೆ.

error: Content is protected !!