ನಗರದಲ್ಲಿ ಇಂದು ಶ್ರೀ ಗುರು ಬಸವಣ್ಣನವರ ಪಲ್ಲಕ್ಕಿ ಉತ್ಸವ

ನಗರದಲ್ಲಿ ಇಂದು ಶ್ರೀ ಗುರು ಬಸವಣ್ಣನವರ ಪಲ್ಲಕ್ಕಿ ಉತ್ಸವ - Janathavani112ನೇ ವರ್ಷದ ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ಬಸವ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಿರಕ್ತ ಮಠ – ಶ್ರೀ ಶಿವಯೋಗಾ ಶ್ರಮದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಇಂದು 7.30ಕ್ಕೆ ಬಸವ ಮನೋಹರ ಭಾವಚಿತ್ರದೊಂದಿಗೆ ಬಸವಾದಿ ಶರಣರ ವಚನ ಗ್ರಂಥ ಮೆರವಣಿಗೆ ಏರ್ಪಾಡಾಗಿದೆ. ಶ್ರೀ ವಿರಕ್ತ ಮಠದಿಂದ ಆರಂಭಗೊಳ್ಳುವ ಮೆರವಣಿಗೆಯು ರಾಜ ಬೀದಿಗಳಲ್ಲಿ ಸಂಚರಿಸಲಿದೆ ಎಂದು ಲಿಂಗಾಯತ ತರುಣ ಸಂಘದ ಸಂಚಾಲಕ ಕಣಕುಪ್ಪಿ ಮುರುಗೇಶಪ್ಪ ತಿಳಿಸಿದ್ದಾರೆ. 

ಬೆಳಿಗ್ಗೆ 9.30ಕ್ಕೆ  ನಡೆಯುವ ಶ್ರೀ ಗುರು ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮದಲ್ಲಿ ಸಣ್ಣ ಮಕ್ಕಳಿಗೆ ನಾಮಕರಣ ಮಾಡಲಾಗುವುದು.   

ನಂತರ ಬೆಳಿಗ್ಗೆ 10.30ಕ್ಕೆ ಲಿಂ. ಶ್ರೀ ಮೃತ್ಯುಂಜಯ ಅಪ್ಪಗಳವರ ಹಾಗೂ ಕರ್ನಾಟಕ ಗಾಂಧಿ ಲಿಂ. ಹರ್ಡೇಕರ್ ಮಂಜಪ್ಪನವರ ಸ್ಮರಣೋತ್ಸವವನ್ನು ಶ್ರೀ ಶಿವಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಅವರಿಂದ ವಚನ ಸಂಗೀತ ಏರ್ಪಾಡಾಗಿದೆ.

error: Content is protected !!