ಅರಣ್ಯ ರಕ್ಷಕ ಚಿಕ್ಕಬಾಸೂರು ವಿಕ್ರಂ ಸಾಧನೆಯ ಶಿಖರ !

ಅರಣ್ಯ ರಕ್ಷಕ ಚಿಕ್ಕಬಾಸೂರು ವಿಕ್ರಂ ಸಾಧನೆಯ ಶಿಖರ !

ಹೊನ್ನಾಳಿ, ಮೇ 26- ಸಾಮಾಜಿಕ ಅರಣ್ಯ ದಲ್ಲಿ ಅರಣ್ಯ ರಕ್ಷಕ ಹುದ್ದೆ ನಿರ್ವಹಿಸುತ್ತಿರುವ ವಿಕ್ರಂ ಅವರಿಗೆ ಚಾರಣ ಮಾಡುವುದು ಹವ್ಯಾಸ.ಈಗಾಗಲೇ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂಥ್, ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಶಿಖರ ಮೌಂಟ್ ಕಿಲಿಮಾಂಜರ್ ಏರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೌಂಟ್ ಎವರೆಸ್ಟ್, ಮೌಂಟ್ ಸತೋ ಪಂಥ್ ಹಾಗೂ ಮೌಂಟ್ ಕಿಲಿಮಾಂಜರ್ ಶಿಖರಗಳನ್ನು ಏರಿ ಸಾಧನೆ ಮಾಡಿದ ಈತ ಹೊನ್ನಾಳಿ ತಾಲ್ಲೂಕಿನ ಚಿಕ್ಕಬಾಸೂರು ತಾಂಡಾದ ವಿಕ್ರಂ. ವಿಕ್ರಂ ಆಫ್ರಿಕಾ ಖಂಡದ ಪ್ರಪಂಚದ ಅತ್ಯಂತ ಎತ್ತರದ ಸ್ವಾತಂತ್ರ್ಯ ಶಿಖರ ಮೌಂಟ್ ಕಿಲಿಮಾಂಜರ್ ಶಿಖರವನ್ನು ಏರಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ವಿಕ್ರಂನೊಂದಿಗೆ ಆಂಧ್ರಪ್ರದೇಶದ ಇಬ್ಬರು ಮತ್ತು ತೆಲಂಗಾಣ ರಾಜ್ಯದ ಒಬ್ಬರು ಸೇರಿ ಒಟ್ಟು ನಾಲ್ಕು ಜನರ ತಂಡ 5895 ಮೀಟರ್ ಎತ್ತರದ ಶಿಖರವನ್ನು ಚಾರಣದ ಮೂಲಕ ತಲುಪಿದ್ದಾರೆ.

ವಿಕ್ರಂ ಹೊನ್ನಾಳಿಯಿಂದ ಮಾ.22ರಂದು ಹೊರಟು ತನ್ನ ಸ್ನೇಹಿತರನ್ನು ಕೂಡಿಕೊಂಡು ಆಫ್ರಿಕಾ ದೇಶಕ್ಕೆ ತೆರಳಿ ಏ.5ಕ್ಕೆ ಮೌಂಟ್ ಕಿಲಿಮಾಂಜರ್ ಶಿಖರವನ್ನು ಚಾರಣದ ಮೂಲಕ ತಲುಪಿದ್ದಾರೆ. ಅಲ್ಲದೇ ಮಹನೀಯರ ಭಾವಚಿತ್ರವನ್ನು ಕಿಲಿಮಾಂಜರ್ ನಲ್ಲಿ ಪ್ರದರ್ಶಿಸಿ, ಅರಣ್ಯ ಹಾಗೂ ಪರಿಸರವನ್ನು ಸಂರಕ್ಷಿಸುವಂತೆ ಘೋಷಣೆ ಕೂಗಿ ಬಂದಿದ್ದಾರೆ.

ಶಿಖರವನ್ನು ಏರಿ ಅದ್ಭುತ ಸಾಧನೆ ಮಾಡಿದ ವಿಕ್ರಂ ಶುಕ್ರವಾರ ಬೆಳಿಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಮನೆಗೆ ಆಗಮಿಸಿ ಧನ್ಯವಾದ ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ, ಮುಖಂಡರಾದ ಮಂಜಪ್ಪ ಸೇರಿದಂತೆ, ಮತ್ತಿತರರಿದ್ದರು.