ಚುನಾವಣೆ : 28-37ನೇ ವಾರ್ಡ್ ಕಾಂಗ್ರೆಸ್ ಸಭೆ

ಚುನಾವಣೆ : 28-37ನೇ ವಾರ್ಡ್ ಕಾಂಗ್ರೆಸ್ ಸಭೆ

ದಾವಣಗೆರೆ, ಮೇ 5-  ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‍ಗಳಿಗೆ ಇದೇ ದಿನಾಂಕ 20ರಂದು ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಸಂಜೆ ಆಕಾಂಕ್ಷಿಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಮುಖಂಡ ಗಣೇಶ್ ಹುಲ್ಲುಮನಿ ಮಾತನಾಡಿ, ಪಕ್ಷ ಯಾರೇ ಅಭ್ಯರ್ಥಿಗಳನ್ನು ಸೂಚಿಸಿದರೂ ಅವರಿಗೆ ಬೆಂಬಲವಾಗಿ ಚುನಾವಣೆ ಎದುರಿಸಬೇಕೆಂದು ಕರೆ ನೀಡಿದರು.

 ಶಾಸಕ  ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸೂಚಿಸುವ ಅಭ್ಯರ್ಥಿ ಪರ ಒಮ್ಮತದಿಂದ ಚುನಾವಣೆ ನಡಸಲಾಗುವುದು ಎಂದು ಅವರು ತಿಳಿಸಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ್, ಸದಸ್ಯ ಅಬ್ದುಲ್ ಲತೀಫ್, ಕೋಳಿ ಇಬ್ರಾಹಿಂ ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.