ಹರಿಹರಕ್ಕೆ ಜಲಧಾರೆ ರಥ

ಹರಿಹರಕ್ಕೆ ಜಲಧಾರೆ ರಥ

ಹರಿಹರ, ಮೇ 4 – ಜಾತ್ಯತೀತ ಜನತಾದಳದ ವತಿಯಿಂದ ರಾಜ್ಯದ ಸಮಗ್ರ ನೀರಾವರಿಗಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಜನತಾ ಜಲಧಾರೆ ರಥವು ನಗರಕ್ಕೆ ಆಗಮಿಸಿದ್ದು, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಅವರು ಗುತ್ತೂರು ಬಳಿಯ ಶ್ರೀ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥಕ್ಕೆ ಹೂವಿನ ಹಾರವನ್ನು ಹಾಕುವ ಮೂಲಕ ಬರಮಾಡಿಕೊಂಡರು.

ನಂತರ ಜನತಾ ಜಲಧಾರೆ ರಥವು ಹರಪನಹಳ್ಳಿ ರಸ್ತೆ, ಹಳೆ ಪಿ.ಬಿ. ರಸ್ತೆಯಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಸಂಚಾರ ಮಾಡಿ ತುಂಗಭದ್ರಾ ನದಿ ದಂಡೆಯ ಮೇಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣವನ್ನು ತಲುಪಿತು.

ಜಲ ಶೇಖರಣೆ ಮಾಡಿರುವ ಕುಂಭಕ್ಕೆ ಮಾಜಿ ಶಾಸಕ ಶಿವಶಂಕರ್ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಅವರು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ  ನಗರಸಭೆ ಸದಸ್ಯ ಗುತ್ತೂರು ಜಂಬಣ್ಣ, ಉಷಾ  ಅಂಗಡಿ ಮಂಜುನಾಥ್,  ಮುಖಂಡರಾದ ದೀಟೂರು ಶೇಖರಪ್ಪ, ನಂಜಪ್ಪ, ಅಮರಾವತಿ ನಾಗರಾಜ್, ಕೊಂಡಜ್ಜಿ ಮೋಹನ್, ದುಗ್ಗೇಶ್ ದಾವಣಗೆರೆ, ಅಮಾನುಲ್ಲಾ ಖಾನ್, ಯೋಗೀಶ್ ಅಮರಾವತಿ, ಶಂಕ್ರಪ್ಪ ಅಮರಾವತಿ, ಮಾರುತಿ ಬೇಡರ್, ಅಂಡಕಿ ಕುಮಾರ್, ಮಹಾದೇವಪ್ಪ ಮಲೇಬೆನ್ನೂರು, ರಾಗಿಣಿ, ಲತಾ ಕೊಟ್ರೇಶ್, ಮಮತಾ, ರಾಜು, ಪೂಜಾರ್ ವೀರಣ್ಣ, ಸದಾಶಿವ,  ಪದ್ಮರಾಜ್, ಕಲ್ಲಪ್ಪ ದೀಟೂರು, ಡಿ.ಸಿ. ವಾಮದೇವ ದೀಟೂರು,  ದೀಟೂರು ಹೆಚ್.ಎಸ್. ಮಲ್ಲಿಕಾರ್ಜುನ, ನಿಂಗಾಚಾರಿ, ಎಲ್.ಕೊಟ್ರೇಶ್, ಹೆಚ್.ಎಸ್. ಮಂಜುನಾಥ್, ಹೆಚ್. ಗದ್ದಿಗೆಪ್ಪ, ಜಗದ್ಗೀಶ್,  ಮತ್ತಿತರರು ಹಾಜರಿದ್ದರು.