ಮಲೇಬೆನ್ನೂರು: ನಾಮಫಲಕ ಉದ್ಘಾಟನೆ

ಮಲೇಬೆನ್ನೂರು: ನಾಮಫಲಕ ಉದ್ಘಾಟನೆ

ಮಲೇಬೆನ್ನೂರು, ಏ.28- ಲಯನ್ಸ್ ಜಿಲ್ಲೆ – 317 ಸಿ ವ್ಯಾಪ್ತಿಯ 19ನೇ  ಲಯನ್ಸ್ ಸಮ್ಮೇಳವು ನಾಡಿದ್ದು ದಿನಾಂಕ 30 ಮತ್ತು ಮೇ 1ರಂದು ಉಡುಪಿಯಲ್ಲಿ ಜರುಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ವಿಶ್ವನಾಥ್ ಶೆಟ್ಟಿ ತಿಳಿಸಿದರು.

ಅವರು ಪಟ್ಟಣದ ಲಯನ್ಸ್ ಕ್ಲಬ್‌ಗೆ ತಮ್ಮ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಕ್ಲಬ್‌ನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಮಾತನಾಡಿದರು.

ಮಲೇಬೆನ್ನೂರು ಲಯನ್ಸ್ ಕ್ಲಬ್ 40 ವರ್ಷಗಳಿಂದ ಅತ್ಯುತ್ತಮ ಸೇವೆ ಮೂಲಕ ಲಯನ್ಸ್ ಜಿಲ್ಲೆ ತನ್ನ ಹಿರಿಮೆ ಹೆಚ್ಚಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಜಿಲ್ಲೆಯ ಲಯನ್ಸ್ ಕ್ಲಬ್‌ಗಳು ಒಂದಕ್ಕಿಂತ ಒಂದು ಹೆಚ್ಚು ವಿಶೇಷ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿವೆ ಎಂದು ವಿಶ್ವನಾಥ್ ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಮಲೇಬೆನ್ನೂರು ಲಯನ್ಸ್ ಕ್ಲಬ್‌ನಿಂದ 250 ವಿದ್ಯಾರ್ಥಿಗಳಿಗೆ ನೋಟ್‌ ಬುಕ್ ವಿತರಿಸಲಾಯಿತು.

ಲಯನ್ಸ್ ಮಾಜಿ ರಾಜ್ಯಪಾಲರುಗಳಾದ  ಡಾ. ಟಿ. ಬಸವರಾಜ್, ಎ.ಆರ್. ಉಜ್ಜಿನಪ್ಪ, ಹೆಚ್.ಎನ್.  ಶಿವಕುಮಾರ್, ಜಿಲ್ಲಾ ಸಂಪುಟ ಖಜಾಂಚಿ ಜಯಪ್ರಕಾಶ್ ಭಂಡಾರಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಮತಿ ರೂಪಾ ಪಾಟೀಲ್, ಮಾಜಿ ಅಧ್ಯಕ್ಷರಾದ ಓ.ಜಿ. ರುದ್ರಗೌಡ್ರು, ಎನ್.ಜಿ. ಶಿವಾಜಿ ಪಾಟೀಲ್, ಡಾ. ಹೆಚ್.ಜೆ. ಚಂದ್ರಕಾಂತ್, ಜಿಗಳಿಯ ಗೌಡ್ರ ಬಸವರಾಜಪ್ಪ, ಬಿ.ಎಂ. ಜಗದೀಶ್ವರಸ್ವಾಮಿ, ವಿದ್ಯಾನಗರ ಲಯನ್ಸ್ ಕ್ಲಬ್‌ನ ದಿಳ್ಳೆಪ್ಪ ಮತ್ತಿತರರು ಭಾಗವಹಿಸಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೋಹಿಣಿ ಜಗದೀಶ್ವರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ನೂತನ ಸದಸ್ಯರಾಗಿ ಚಿಟ್ಟಕ್ಕಿ ನಾಗರಾಜ್, ಉಡೇದರ್ ಸಿದ್ದೇಶ್, ಸಿರಿಗೆರೆ ಸಿದ್ದಪ್ಪ, ಬೆಣ್ಣೆಹಳ್ಳಿ ಸಿದ್ದೇಶ್ ಮತ್ತು ಕುಂಬಳೂರಿನ ಕೆ.ಹೆಚ್. ಚನ್ನಬಸವ ಅವರು ಪ್ರಮಾಣ ವಚನ ಸ್ವೀಕರಿಸಿದರು.

ರಾಜೀವ್ ಕೋಟಿಯಾನ್ ಅವರು 2ನೇ ಉಪ ಜಿಲ್ಲಾ ಗೌರ್ನರ್ ಹುದ್ದೆಗೆ ಮತ ಯಾಚಿಸಿದರು.

ನಾಮಫಲಕ ಉದ್ಘಾಟನೆ : ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೋಹಿಣಿ ಜಗದೀಶ್ವರ ಸ್ವಾಮಿ ಅವರು ಕೊಡುಗೆ ನೀಡಿದ ಮಲೇಬೆನ್ನೂರು ಪಟ್ಟಣಕ್ಕೆ ಸ್ವಾಗತ ಮತ್ತು ವಂದನೆ ಹೇಳುವ ನಾಮಫಲಕಗಳ್ನು ಪಟ್ಟಣದ ಹೊರ ವಲಯದಲ್ಲಿ ಜಿಲ್ಲಾ ಗೌರ್ನರ್ ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು.