ಅಂಬೇಡ್ಕರ್ ಸಂದೇಶ ಸಾರಲು ಸೈಕಲ್ ರಾಲಿ

ಅಂಬೇಡ್ಕರ್ ಸಂದೇಶ ಸಾರಲು ಸೈಕಲ್ ರಾಲಿ

ದಾವಣಗೆರೆ, ಏ.25- ಡಾ. ಬಿ.ಆರ್.ಅಂಬೇಡ್ಕರ್‍ ಅವರ ಸಂದೇಶ ಸಾರಲು, ನಗರದ ಅಂತರರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣರಾವ್ ಸಾಳಂಕಿ ಮತ್ತು ಅಂತರರಾಷ್ಟ್ರೀಯ ತರಬೇತುದಾರ ಸಂತೋಷ್ ಡಿ. ಅವರುಗಳು ಇದೇ ದಿನಾಂಕ 14 ರಿಂದ 22ರವರೆಗೆ ಸೈಕಲ್  ರಾಲಿ ಹಮ್ಮಿಕೊಂಡಿದ್ದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೈಕಲ್  ರಾಲಿಗೆ ಚಾಲನೆ ನೀಡಿದ್ದರು.

ಮುಂಬೈನ ಡಾ. ಅಂಬೇಡ್ಕರ್‍ರವರ ಚೈತ್ಯ ಭೂಮಿ ತಲುಪಿ, ಅಂತಿಮವಾಗಿ ಆ ಸ್ಥಳದಲ್ಲಿಯೇ ಸಂದೇಶ ಸಾರುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ತುಂಬಾ ಸಂತೋಷವನ್ನು ನೀಡಿತು. 

ಆರೋಗ್ಯದ ಬಗ್ಗೆ ವಿವಿಧ ಜನಪರ ಜೀವನಗಳ ಕುರಿತು ಸಂದೇಶಗಳನ್ನು ಸಾರುತ್ತಾ ಜನರ ಮೆಚ್ಚುಗೆಗೆ ಪಾತ್ರವಾದೆವು. ಈ  ಮೂಲಕ ನಾವು ಸಮಾಜಕ್ಕೆ ಚಿಕ್ಕ ಕೊಡುಗೆ ಕೊಟ್ಟಂತಾಯಿತು  ಎಂದು ಲಕ್ಷ್ಮಣರಾವ್ ಸಂತಸ ವ್ಯಕ್ತಪಡಿಸಿದ್ದಾರೆ.