ಎರೇಬೂದಿಹಾಳ್ : ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮ

ಎರೇಬೂದಿಹಾಳ್ : ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮ

ಮಲೇಬೆನ್ನೂರು, ಏ.4- ಎರೇಬೂದಿಹಾಳ್ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮವನ್ನು ಮಾಜಿ ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಹರೀಶ್ ಅವರು, ಬಾಲ್ಯ ವಿವಾಹದ ಬಗ್ಗೆ ಜನರಲ್ಲಿ ಅರಿವು ಮೂಡಿದ್ದು, ಇತ್ತೀಚಿಗೆ ಬಾಲ್ಯ ವಿವಾಹಗಳು ಬಹಳ ಕಡಿಮೆ ಆಗಿವೆ. ಇನ್ನೂ ಕೆಲವು ಜನರಲ್ಲಿ ಈ ಬಗ್ಗೆ ಅರಿವು ಇಲ್ಲ. ಇಂತಹ ಜಾಗೃತಿ ಕಾರ್ಯಕ್ರಮವನ್ನು ಪ್ರತಿ ಹಳ್ಳಿಯಲ್ಲೂ ಮಾಡಬೇಕೆಂದರು. 

ರಾಜ್ಯಮಟ್ಟದ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಸ್ವೀಕರಿಸಿರುವ ಗ್ರಾಮದ ಶ್ರೀಮತಿ ಛಾಯಿನಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಶ್ರೀಮತಿ ನಿರ್ಮಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವರಬೆಳಕೆರೆ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಮಹೇಶ್ವರಮ್ಮ, ಕಾರ್ಯದರ್ಶಿ ಡಿ.ಕೆ.ರಾಜಪ್ಪ, ಅಂಗನವಾಡಿಗಳ ಮೇಲ್ವೆಚಾರಕರಾದ ಮಂಜುಳಾ ಬಂಗಾರಿ, ಕವಿತಾ ಬಸವನಗೌಡ ಪ್ರೌಢಶಾಲೆಯ ಶಿಕ್ಷಕರಾದ ಪದ್ದಪ್ಪ, ರುದ್ರಪ್ಪ, ಗ್ರಾ.ಪಂ. ಸದಸ್ಯರಾದ ಶಿವರಾಜ್, ಲಲಿತಮ್ಮ, ಹನುಮಮ್ಮ, ಹಾ.ಉ.ಸ. ಸಂಘದ ಅಧ್ಯಕ್ಷ ಕೆಂಚಪ್ಪ, ಶ್ರೀ ಆಂಜನೇಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸುಗುಣ ಮೇರಿ, ನಿವೃತ್ತ ಮೇಲ್ವಿಚಾರಕರಾದ ಕುಸುಮ ಬಾಯಿ ಮತ್ತು ಇತರರು ಭಾಗವಹಿಸಿದ್ದರು.