ಕಬಳಿಸಿದ ಜಾಗ ಹಿಂತಿರುಗಿಸಲು ಮನವಿ

ಕಬಳಿಸಿದ ಜಾಗ ಹಿಂತಿರುಗಿಸಲು ಮನವಿ

ದಾವಣಗೆರೆ, ಮಾ. 10- ಹೊಸಕುಂದವಾಡ ಗ್ರಾಮದ ಆಂಜಿನಪ್ಪ ಎಂಬುವವರಿಂದ ಅಂಗನವಾಡಿ ಕೇಂದ್ರ ಹಾಗೂ ಹಿಟ್ಟಿನ ಗಿರಣಿ ಇರುವ ಸರ್ಕಾರಿ ಜಾಗವನ್ನು ಕಬಳಿಸಿದ್ದು, ಅದನ್ನು  ಬಿಡಿಸಿ ಕೊಡುವಂತೆ ಗ್ರಾಮಸ್ಥರು ಇಂದು ಜಿಲ್ಲಾಡಳಿತ, ನಗರಾ ಡಳಿತ, ತಾಲ್ಲೂಕು ಅಡಳಿತಕ್ಕೆ ಮನವಿ ಸಲ್ಲಿಸಿದರು.

ಅಂಜಿನಪ್ಪ ಎಂಬುವವರು ಸರ್ಕಾರಿ ಜಾಗ ಡೋರ್ ನಂ. 219ರಲ್ಲಿ ಸರ್ಕಾರಿ ಪಂಚಾಯ್ತಿ ಹಿಟ್ಟಿನ ಗಿರಣಿ ಮತ್ತು ಡೋರ್ ನಂ. 220ರಲ್ಲಿ ಪಂಚಾಯ್ತಿ ವಾಸದ ಮನೆ ‘ಎಂದು ನಮೂದಾಗಿದ್ದು, ಅಧಿಕಾರಿಗಳು ಮತ್ತು ಇತರೆಯವರು ಸೇರಿ ಜಾಗವನ್ನು ಖಾತೆ ಬದಲಾವಣೆ ಮಾಡಿಸಿ ಕೊಂಡಿದ್ದಾರೆ. ಅವರ ಹಳೇ ನಂಬರಿನ ಜೊತೆಗೆ ಸರ್ಕಾರ ಜಾಗವನ್ನು ಮತ್ತು ಅಳತೆ ಯನ್ನು ಸೇರಿಸಿ ಬರೆಯಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸರ್ಕಾರಿ ಜಾಗವನ್ನು ಇದೇ ಊರಿನ ಹನುಮಂತಪ್ಪ ಎಂಬುವವರಿಗೆ ಮುಂಗಡ ಹಣ ಪಡೆದು, ಸರ್ಕಾರಿ ಜಾಗವನ್ನು ಬರೆದುಕೊಟ್ಟಿದ್ದಾರೆ. ಕುಂದುವಾಡ ಗ್ರಾಮದಲ್ಲಿ ಸುಮಾರು 7 ಎಕರೆ 16 ಗುಂಟೆ ಜಮೀನು ನಮ್ಮ ತಾತನವರಿಗೆ ಸೇರಿದ್ದು ಎಂದು ಪತ್ರಿಕೆ ಪಕಟಣೆ ಹೊರಡಿ ಸಿರುತ್ತಾರೆ. ಈಗಾಗಲೇ ಗಾಮಸ್ಥರುಗಳು ತಮ್ಮ ತಮ್ಮ ಖಾತೆಯಲ್ಲಿರುವ ಕಂದಾಯವನ್ನು ಸುಮಾರು ವರ್ಷಗ ಳಿಂದ ಭರಿಸಿರುತ್ತಾರೆ. ಆದ್ದರಿಂದ ತಾವುಗಳು ಈ ಸರ್ಕಾರಿ ಜಾಗವನ್ನು ಬಿಡಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಮಹಾಂ ತೇಶ್ ಬೀಳಗಿ, ಉಪವಿಭಾಗಾಧಿಕಾರಿ ಮಮತಾ ಹೊಸ ಗೌಡರ್, ತಹಸೀಲ್ದಾರ್, ನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದ್ದಜ್ಜಿ ಅವರಿಗೆ ಕೋರಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಮಪ್ಪ, ಬಸನಗೌಡ್ರ, ಶಿವಕುಮಾರ್, ಲೋಕೇಶ್, ಮಹೇಶಪ್ಪ, ಅಣ್ಣಪ್ಪ, ವಿರುಪಣ್ಣ, ಹನುಮಂತಪ್ಪ, ಹೇಮಂತ್, ಲೋಹಿತ್ ಸೇರಿದಂತೆ ಇತರರು ಇದ್ದರು.