ಯುವ ಜನರಲ್ಲಿ ದೇಶಭಕ್ತಿ ಜಾಗೃತಿ ಕೋಮಲ ಪಾಟೀಲ ಸೋಲೋ ರೈಡ್

ರಾಣೇಬೆನ್ನೂರು, ಮಾ. 7- ಹುಬ್ಬಳ್ಳಿ ಬಿವಿಬಿ ಎಂಜಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ (ರಾಣೇಬೆನ್ನೂರು ರಾಜೇಶ್ವರಿ ನಗರದ) ಕೋಮಲ ಪಾಟೀಲ ಇವರು ರಸ್ತೆ ಸುರಕ್ಷತೆ, ಜಾಗೃತಿ ಹಾಗೂ ಯುವ ಜನರಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ನಾಳೆ ದಿನಾಂಕ 8ರ ಮಂಗಳವಾರ ನಗರದಿಂದ ಬೈಕ್‍ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆಗೆ (ಸೋಲೋ ರೈಡ್) ಹೊರಟಿದ್ದಾರೆ. 

ಇವರು ನಗರದಿಂದ ಮುಂಬೈ, ವಡೋದರಾ, ಉದಯಪುರ, ಜೈಪುರ, ಅಮೃತಸರ, ಶ್ರೀನಗರ, ಲೂಧಿಯಾನ, ಶೀಮ್ಲಾ, ದೆಹಲಿ, ಆಗ್ರಾ, ಇಂದೋರ್, ಔರಂಗಾಬಾದ್, ಸೋಲಾಪುರ್ ಮೂಲಕ ದೇಶ ಪರ್ಯಟನೆ ಕೈಗೊಂಡು, ನಗರಕ್ಕೆ ಹಿಂದಿರುಗಲಿದ್ದಾರೆ. ಯುವಜನತೆಯಲ್ಲಿ ದೇಶಭಕ್ತಿ, ದೇಶಪ್ರೇಮ, ರಸ್ತೆ ಸುರಕ್ಷತೆ ಹಾಗೂ ಜೀವನದ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳದೆ, ಸಮಸ್ಯೆಯ ವಿರುದ್ಧ ಹೋರಾಡಿ ಎಂದು ಯುವ ಜನತೆಗೆ ಧೈರ್ಯ, ಮನೋಬಲ ತುಂಬುವುದು ಸೋಲೋ ರೈಡ್‍ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.