ಯೋಗರತ್ನ ಪರಶುರಾಮಪ್ಪಗೆ `ಸಮಾಜ ಸೇವಾಶ್ರೀ’ ಪ್ರಶಸ್ತಿ

ದಾವಣಗೆರೆ, ಫೆ. 25- ನಗರದ ಎಸ್ ಎಎಸ್ಎಸ್ ಯೋಗ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಯೋಗ ರತ್ನ ಎನ್. ಪರಶುರಾಮಪ್ಪ ಅವರಿಗೆ `ಸಮಾಜ ಸೇವಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತುಮಕೂರು ತಾಲೂಕಿನ ಸುಕ್ಷೇತ್ರ ಚಿಕ್ಕತೊಟ್ಟಿಲುಕೆರೆ ಅಟವೀಶ್ವರ ಮಹಾಶಿವಯೋಗಿಗಳ ಕೃಪಾಶೀರ್ವಾದದೊಂದಿಗೆ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೇ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾಜ ಸೇವಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿಕ್ಕತೊಟ್ಟಿಲುಕೆರೆ ಬಸವ ಯೋಗಿ ಗುರೂಜಿ ಎನ್.ಪರಶುರಾಮಪ್ಪ ಅವರಿಗೆ ‘ ಸಮಾಜ ಸೇವಾಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ದೇವರಾಜ್, ಸರ್.ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗ ಹಾಗೂ ಚಿತ್ರನಟ ಡಾ.ರಾಘವೇಂದ್ರ ಮೋಕ್ಷಗುಂಡಂ, ಪುಟ್ಟಗೌರಿ ಧಾರಾವಾಹಿ ನಟಿ ಮೀನಾಕ್ಷಿ ಸೇರಿದಂತೆ ಇನ್ನಿತರರಿದ್ದರು.