ಜಿಲ್ಲಾಡಳಿತದಿಂದ ಕವಿ ಶ್ರೀ ಸರ್ವಜ್ಞ ಜಯಂತಿ

ಜಿಲ್ಲಾಡಳಿತದಿಂದ ಕವಿ ಶ್ರೀ ಸರ್ವಜ್ಞ ಜಯಂತಿ

ದಾವಣಗೆರೆ, ಫೆ.22- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ  ವತಿಯಿಂದ ತ್ರಿಪದಿ ಕವಿ ಶ್ರೀ ಸರ್ವಜ್ಞ   ಜಯಂತಿಯನ್ನು ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.

ಕುಂಬಾರ ಸಮಾಜದ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ,  ಸರ್ವಜ್ಞ ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಯಲ್ಲಿ ವರ್ಣನೆ ಮಾಡಿದ್ದಾರೆ. ಪ್ರತಿಯೊಬ್ಬರೂ ಸಹ ಸರ್ವಜ್ಞರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.

ಕುಂಬಾರ ಸಮಾಜದ  ಗೌರವಾಧ್ಯಕ್ಷ ಬಸವರಾಜು ಕುಂಚೂರು ಮಾತನಾಡಿ, ಸರ್ವಜ್ಞ ಸತ್ಯ ಶುದ್ಧ ಕಾಯಕ  ಮಾಡುತ್ತಾ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಪ್ರಸ್ತುತ ನಮ್ಮ ಸಮಾಜ ಬಹಳ ಹಿಂದುಳಿದಿದೆ. ಇನ್ನು ಮುಂದೆ ಎಲ್ಲರು ಸರ್ವಜ್ಞರ ಕಾಯಕವನ್ನು ನಂಬಿ ಸಮಾಜವನ್ನು ಚೆನ್ನಾಗಿ ಬೆಳೆಸಿಕೊಂಡು ಹೋಗೋಣ ಎಂದು ಹೇಳಿದರು.

ಕುಂಬಾರ ಸಮಾಜದ ಉಪಾ  ಧ್ಯಕ್ಷ ಕರಿಬಸಪ್ಪ ಮಾತನಾಡಿ, ಸರ್ವಜ್ಞರ ತ್ರಿಪದಿಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅನಾವರಣಗೊಳಿಸಬೇಕು. ಸರ್ಕಾರದಿಂದ ಈ ಸಮಾಜಕ್ಕೆ  ಸವಲತ್ತುಗಳನ್ನು ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ,  ಕುಂಬಾರ ಸಮಾಜದ ಟೌನ್ ಅಧ್ಯಕ್ಷ ಕೆ.ಜಿ. ಷಣ್ಮುಖಪ್ಪ, ಇ. ತಿಪ್ಪೇಸ್ವಾಮಿ, ಟಿ. ಅಜ್ಜಣ್ಣ, ಕೆ.ಎಂ. ಬಸವರಾಜ, ಸದಾಶಿವಪ್ಪ,  ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.