ಹೊನ್ನಾಳಿ : ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಜಾತ್ರಾ ಮಹೋತ್ಸವ

ಹೊನ್ನಾಳಿ : ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಜಾತ್ರಾ ಮಹೋತ್ಸವ

ಹೊನ್ನಾಳಿ, ಫೆ. 17- ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಮಾಯಾಂಬಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ಭರತ ಹುಣ್ಣಿಮೆ ಪ್ರಯುಕ್ತ ಮಾಯಾಂಬಿಕಾ ದೇವಿ ಅಡ್ಡಪಲ್ಲಕ್ಕಿ ಜಾತ್ರಾ ಮಹೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗ್ರಾ.ಪಂ. ಜನಪ್ರತಿನಿಧಿಗಳು, ಜಿ.ಪಂ. ಸದಸ್ಯೆ, ಗ್ರಾಮದ ವಿವಿಧ ದೇವಸ್ಥಾನಗಳ ಸಮಿತಿ ಅಧ್ಯಕ್ಷರು, ಯರೇಹಳ್ಳಿ ವ್ಯವಸಾಯ ಸಹಕಾರ ಸಂಘದ ಆಡಳಿತ ಮಂಡಳಿಯವರಿಗೆ ಮತ್ತು ಗ್ರಾಮದ ವಿವಿಧ ಜನಾಂಗದ ನಿವೃತ್ತಿಯಾದ ನೌಕರ ವರ್ಗದವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರಾದ ದೀಪಾ ಜಗದೀಶ್, ಗ್ರಾ.ಪಂ. ಅಧ್ಯಕ್ಷ ದಯಾನಂದ, ಗ್ರಾಮದ ನಿವೃತ್ತ ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ದಾವಣಗೆರೆ) ಎಸ್.ಎಲ್. ಆನಂದಪ್ಪ, ದೇವಸ್ಥಾನದ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಕೆ.ಆರ್. ಶಂಭುಲಿಂಗಪ್ಪ, ನಿವೃತ್ತ ಉಪನ್ಯಾಸಕ ಜಿ.ಎಸ್. ರುದ್ರಪ್ಪ, ನಿವೃತ್ತ ಶಿಕ್ಷಕ ಎಂ.ತಿಪ್ಪಣ್ಣ, ಶಿವಕುಮಾರಸ್ವಾಮಿ, ರೇವಣಸಿದ್ದಪ್ಪ, ಮಹೇಶ್ವರಪ್ಪ, ಜಯಪ್ಪ, ಬಸವರಾಜಪ್ಪ, ಹಾದಿಮನೆ ರಾಜಣ್ಣ, ತುಮಕೂರು ಗೃಹಮಂಡಳಿ ಸಹಾಯಕ ಕಾರ್ಯ ಪಾಲಕ ಅಭಿಯಂತರ ಎಸ್‌.ಎಲ್. ಹಾಲೇಶಪ್ಪ, ದೊಡ್ಡರಂಗಪ್ಪ, ಪರಮೇಶ್ವರಪ್ಪ, ಯು.ಆರ್. ಸತೀಶ್, ಯು.ಆರ್. ಅಶೋಕ್, ಬಸವರಾಜ, ರಾಜಪ್ಪ, ತಿಪ್ಪೇಶ್, ಮಂಜು, ಮಹೇಶ್ವರಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.