ಹರಿಹರ: ಕಾಟಾಚಾರದ ಬಜೆಟ್ ಸಭೆ

ಹರಿಹರ: ಕಾಟಾಚಾರದ ಬಜೆಟ್ ಸಭೆ

ಹರಿಹರ,ಫೆ. 8-ಇಲ್ಲಿನ ನಗರಸಭೆ ಸಭಾಂಗಣದಲ್ಲಿ  ಕರೆಯಲಾಗಿದ್ದ ಎರಡನೇ ಬಜೆಟ್ ಪೂರ್ವಭಾವಿ ಸಭೆಗೆ ಪೌರಾಯುಕ್ತೆ ಎಸ್‌.ಲಕ್ಷ್ಮೀ ಮತ್ತು ಅಧ್ಯಕ್ಷೆ ರತ್ನ ಡಿ. ಉಜ್ಜೇಶ್ ಸೇರಿ, ಹಲವಾರು ಸದಸ್ಯರು ಒಂದು ಗಂಟೆ ತಡವಾಗಿ ಆಗಮಿಸಿದ ಕಾರಣ ಸಭೆಗೆ ಬಂದಿದ್ದ ಬೆರಳೆಣಿಕೆಯಷ್ಟು ಸದಸ್ಯರು ಕಾದು ಕಾದು ಸುಸ್ತಾಗಬೇಕಾಯಿತು.

ಆಯವ್ಯಯ ತಯಾರಿಸಲು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಂದ ಸಲಹೆ, ಸೂಚನೆ ಪಡೆಯಲು ಸಾರ್ವಜನಿಕರ ಸಮಾಲೋಚನಾ ಸಭೆ ಕರೆಯಲಾಗಿತ್ತು. ನಂತರ ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್‌ ಸಭೆಯನ್ನು ಪ್ರಾರಂಭ ಮಾಡುವುದಕ್ಕೆ ಮುಂದಾದರು. ಆದರೆ, ಸಭೆ ಆರಂಭಗೊಂಡರೂ ಬೆರಳೆಣಿಕೆಯಷ್ಟು ಮಾತ್ರ ಸದಸ್ಯರು ಸಭೆಯಲ್ಲಿ ಇದ್ದುದರಿಂದ ಮತ್ತು ಪೌರಾಯುಕ್ತರು ಇಲ್ಲದೇ ಇರುವುದರಿಂದ  ಸಭೆಯನ್ನು ಕಾಟಾಚಾರಕ್ಕೆ ಮಾಡಿ ಮುಗಿಸಿದರು.

ಸದಸ್ಯರಾದ ಕೆ.ಜಿ. ಸಿದ್ದೇಶ್, ಅಶ್ವಿನಿ ಕೃಷ್ಣ, ಶಾಹಜಾದ್ ಸನಾವುಲ್ಲಾ, ಎಸ್.ಎಂ.ವಸಂತ್, ಉಷಾ ಮಂಜುನಾಥ್, ಎಇಇ ಬಿರಾದಾರ ಇತರರು ಹಾಜರಿದ್ದರು.