ವಿದ್ಯಾರ್ಥಿಗಳು ಶ್ರದ್ಧೆ, ಛಲದಿಂದ ಓದಿದರೆ ಸಾಧನೆ ಸಾಧ್ಯ

ವಿದ್ಯಾರ್ಥಿಗಳು ಶ್ರದ್ಧೆ, ಛಲದಿಂದ ಓದಿದರೆ ಸಾಧನೆ ಸಾಧ್ಯ

ಮಲೇಬೆನ್ನೂರು, ಫೆ. 8- ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಲ್ಲಿ ಮನಸ್ಸನ್ನು ಬೇರೆಡೆಗೆ ಹಾಯಿಸದೆ, ಶ್ರದ್ಧೆ ಹಾಗೂ ಛಲದಿಂದ ವಿದ್ಯಾಭ್ಯಾಸದ ಕಡೆಗೆ ಹರಿಸಬೇಕೆಂದು ಹರಿಹರದ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ತಿಳಿಸಿದರು.

ಅವರು ಹಾಲಿವಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ನವರು ನೀಡಿದ ನೋಟ್‌ಬುಕ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ನಾವು ಹಳ್ಳಿಯವರವೆಂಬ ಕೀಳರಿಮೆ ಇದೆ. ಅದನ್ನು ಮೊದಲು ಮನಸ್ಸಿನಿಂದ ತೆಗೆದು ಹಾಕಿ ಛಲದಿಂದ ಓದಿದರೆ, ನಗರ – ಪಟ್ಟಣಗಳ ವಿದ್ಯಾರ್ಥಿಗಳನ್ನು ಹಿಂದೆ ಸರಿಸಬಹುದೆಂದು ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಗ್ರಾ.ಪಂ. ಪಿಡಿಓ ರಮೇಶ್ ಮಾತನಾಡಿದರು. ಎಸಿಓಗಳಾದ ಅಶೋಕ್ ಕಾಳೆ, ಹರೀಶ್ ನೋಟಗಾರ್, ಮುಖ್ಯ ಶಿಕ್ಷಕ ಮರುಳಸಿದ್ದಪ್ಪ, ತಾ. ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್‌ಕುಮಾರ್ ಹೆಗಡೆ, ಸಿಆರ್‌ಪಿ ರಾಜಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.