`ಲಾಕ್‌ಡೌನ್-3′ ಜನರಲ್ಲಿ ಜಾಗೃತಿ ಮೂಡಿಸಲಿ

`ಲಾಕ್‌ಡೌನ್-3′ ಜನರಲ್ಲಿ ಜಾಗೃತಿ ಮೂಡಿಸಲಿ

ದಾವಣಗೆರೆ, ಜ.18- ಕೊರೊನಾ ದೇಶದೆಲ್ಲೆಡೆ ಹಬ್ಬಿ, ಜನರ ನೆಮ್ಮದಿ ಜೊತೆಗೆ ಬದುಕಿಗೆ ಅಡೆ-ತಡೆ ಉಂಟು ಮಾಡಿದೆ. ಜೀವವಿದ್ದರೆ ಜೀವನ ಎನ್ನುವಂತಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ನಗರದ ಶ್ರೀ ಸಾಯಿ ಭವನದಲ್ಲಿ ವೈಷ್ಣವಿ ಎಂ. ಫಿಲ್ಮ್‌ರವರ ನಿವೃತ್ತ ಶಿಕ್ಷಕಿ, ದಯಾಮರಣ ಹೋರಾಟಗಾರ್ತಿ ಹೆಚ್.ಬಿ.  ಕರಿಬಸಮ್ಮ ಅವರ ಆಶೀರ್ವಾದದೊಂದಿಗೆ ರಂಗ ಕಲಾವಿದ ಮಂಜುನಾಥ್ ಹೊಳೆಸಿರಿಗೆರೆ ಅವರ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನ, ನಿರ್ಮಾಣದ `ಲಾಕ್‌ಡೌನ್’- 3 ‘ ಕಿರು ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಕ್ಲಾಪ್ ಮಾಡಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸಹ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡಿದರು. ಲಾಕ್‌ಡೌನ್-3 ಕಿರುಚಿತ್ರವು ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ ಮತ್ತು ರಾಜ್ಯಾದ್ಯಂತ ಪ್ರದರ್ಶನ ಕಂಡು ಯಶಸ್ಸು ಸಿಗಲಿ ಎಂದು ಹಾರೈಸಿದರು.

ಹಿರಿಯ ನ್ಯಾಯಾವಾದಿ ಬಳ್ಳಾರಿ ರೇವಣ್ಣ ಕ್ಯಾಮರಾ ಚಾಲನೆ ಮಾಡಿ ಮಾತನಾಡಿ, ಚಿತ್ರದಲ್ಲಿ ಬರೀ ಸರ್ಕಾರದ ಲೋಪದೋಷಗಳನ್ನು ತೋರಿಸುವಂತಾಗಬಾರದು. ಜನರ ಕರ್ತವ್ಯಗಳೇನು ?, ಕೊರೊನಾದ ವಿರುದ್ಧ ನಮ್ಮ ಹೋರಾಟವೇನು ? ಈ ಸಮಸ್ಯೆಗಳಿಂದ ಹೊರಗೆ ಹೇಗೆ ಬರಬೇಕು, ಕೊರೊನಾ ಮುಕ್ತರಾಗುವ ಬಗ್ಗೆ ಸಂದೇಶವಿರಲಿ ಎಂದರು.

ನಿರ್ಮಾಣದ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಾದಲ್ಲಿ ನಾವು ಮತ್ತು ಕಲಾಭಿಮಾನಿಗಳು ಆರ್ಥಿಕ ನೆರವು ನೀಡಿ ಹೊರತರುವ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಾಡಾದ ಆನಂದರಾಜ್, ಬಿ. ಚಂದ್ರಶೇಖರ್, ವೆಂಕಟೇಶ್ ಕಂದನಕೋವಿ ಮತ್ತಿತರರಿದ್ದರು.

ಮಲ್ಲಿಕಾರ್ಜುನ ಟಿ. ಜವಳಘಟ್ಟ, ಅಂಜಿನಪ್ಪ ಎಂ.ಜಿ. ಬೆಳ್ಳೂಡಿ ಇವರ ಸಹ ನಿರ್ದೇಶನವಿದೆ. ಸಿ. ಸಾನ್ವಿ ಅವರ ಸಹಕಾರವಿದ್ದು, ಎಂ.ಜಿ. ಶಿವಶಂಕರ್, ಸಂಜನ ಎಸ್., ಶ್ರೇಷ್ಠ, ಶಿವಕುಮಾರ್, ರವೀಂದ್ರ ಸಾಣೂರು, ಸೃಷ್ಠಿ ಕೆ.ವೈ., ಸೂರ್ಯ ಎನ್.ಎ., ಕೆ. ಗಿರೀಶ್, ಸಹನ ಇ., ಶಶಾಂಕ್ ಎಂ.ಎನ್., ಜಯಸೂರ್ಯ ಎನ್, ಚೇತನ್ ಕುಮಾರ್ ಜಿ, ಅಂಜಿನಪ್ಪ ಎಂ.ಜಿ., ಪುನೀತ್ ವಿ., ಶಹನಾಜ್, ಗಣೇಶ್ ಇ, ಖುಷಿ ಎ.ಜಿ., ಜಾನ್ಸಿ ಎಸ್. ಅಕ್ಕಿ, ಸುಮ ಎಸ್, ಬಿಂದುಶ್ರೀ ಜೆ. ಅಭಿನಯಿಸಿದ್ದಾರೆ.