ಧೂಳೇಹೊಳೆ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳ ಪ್ರದರ್ಶನ

ಧೂಳೇಹೊಳೆ ಶಾಲೆಯಲ್ಲಿ ಸ್ವಾತಂತ್ರ್ಯ  ಹೋರಾಟಗಾರರ ಚಿತ್ರಗಳ ಪ್ರದರ್ಶನ

ಹರಿಹರ, ಜ.16- ತಾಲ್ಲೂಕಿನ  ಧೂಳೇಹೊಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಮಾರಪಟ್ಟಣದ ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಚಿತ್ರಕಲಾವಿದ ಡಾ|| ಜಿ. ಜೆ. ಮೆಹೆಂದಳೆ ಚಿತ್ರಿಸಿದ ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಮುಖ್ಯೋಪಾಧ್ಯಾಯ ಬಸವರಾಜ ಉದ್ಘಾಟನೆ ಮಾಡಿ, ಸುಮಾರು ನಲವತ್ತು  ಹೋರಾಟಗಾರರ ಚಿತ್ರಗಳು ಇಲ್ಲಿ ಅನಾವರಣಗೊಂಡಿವೆ. ಈ ಭಾವ ಚಿತ್ರಗಳ ಪ್ರದರ್ಶನದಿಂದ ನಮ್ಮ ಶಾಲೆಯ ಮಕ್ಕಳು ಹೋರಾಟಗಾರರ ಚಿತ್ರಗಳನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ. ಮೆಹೆಂದಳೆಯವರ ಈ ಕಾರ್ಯ ಶ್ಲಾಘನೀಯವಾದುದು ಎಂದು ನುಡಿದರು.

ಭಾವಚಿತ್ರಗಳ ಕುರಿತು ಶರಣಕುಮಾರ ಹೆಗಡೆ ವಿವರಣೆ ನೀಡಿದರು. ಸಮಾರೋಪ ಭಾಷಣ ಮಾಡಿದ ಮಂಗಳಾ ಅವರು, ಮೆಹಂದಳೆ  ಅವರಂತೆ ಏನಾದರೂ ಸಾಧನೆ ಮಾಡಿದಲ್ಲಿ ನೀವೂ ಕೂಡ ಸಾಧಕರಾಗಲು ಸಾಧ್ಯ ಎಂದು  ವಿದ್ಯಾರ್ಥಿಗಳಿಗೆ ಹಿತ ನುಡಿದರು.  ಶಿಕ್ಷಕರಾದ ಉಮೇಶ್ ಎಚ್. ಎಂ, ಲೈಖಾಬಾನು, ಹೇಮಾ ಟಿ. ವಿ,  ರಶ್ಮೀ ಡಿ. ಜಿ. ಉಪಸ್ಥಿತರಿದ್ದರು.