ವೈಕುಂಠ ಏಕಾದಶಿ ಪ್ರಯುಕ್ತ ಸಾಯಿಬಾಬಾ ಮಂದಿರದಲ್ಲಿ ಪೂಜೆ

ವೈಕುಂಠ ಏಕಾದಶಿ ಪ್ರಯುಕ್ತ ಸಾಯಿಬಾಬಾ ಮಂದಿರದಲ್ಲಿ ಪೂಜೆ

ಹರಿಹರ, ಜ.13- ನಗರದ ಪಾಟೀಲ್ ಬಡಾವಣೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ವೈಕುಂಠ ಏಕಾದಶಿ ನಿಮಿತ್ತವಾಗಿ ಶ್ರೀ ಸಾಯಿಬಾಬಾ, ವಿನಾಯಕ, ಕಾಶಿ ವಿಶ್ವನಾಥ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಸವರಾಜ್ ಪಾಟೀಲ್, ಉಪಾಧ್ಯಕ್ಷ ಸುರ್ವೆ ಹನುಮಂತಪ್ಪ, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಬ್ಯಾಂಕ್ ರಾಮಣ್ಣ, ಸರಪದ, ಸಂಗನಾಳ ಮಠ್, ಅರ್ಚಕ ಕುಮಾರ ಸ್ವಾಮಿ ಉಪಸ್ಥಿತರಿದ್ದರು.