ವೀರಶೈವ ಮಹಾಸಭಾದ ಉಮೇಶ್ ಪಾಟೀಲ್ ಅವರಿಗೆ ಸನ್ಮಾನ

ವೀರಶೈವ ಮಹಾಸಭಾದ  ಉಮೇಶ್ ಪಾಟೀಲ್ ಅವರಿಗೆ ಸನ್ಮಾನ

ದಾವಣಗೆರೆ, ಜ.12 – ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ಕೈಗಾರಿಕೆ ಮತ್ತು  ವಾಣಿಜ್ಯ  ಸಮಿತಿಯ ರಾಜ್ಯ ಅಧ್ಯಕ್ಷ ಉಮೇಶ್ ಪಾಟೀಲ್‍ ಅವರಿಗೆ ದೂಡಾ ಅಧ್ಯಕ್ಷ ಹಾಗೂ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಘಟಕದ ಕಾರ್ಯಕಾರಣಿ ಸದಸ್ಯರು ಮಾಜಿ ಪಾಲಿಕೆ ಸದಸ್ಯರಾದ ಶಿವನಗೌಡ ಟಿ.ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ಕರೇಶಿವಪ್ಳರ್ ಸಿದ್ದೇಶ್, ಕಾರ್ಯದರ್ಶಿ ಜಯಪ್ರಕಾಶ್ ಮಾಗಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಟಿಂಕರ್ ಮಂಜಣ್ಣ, ಗಿರೀಶ್ ಎಸ್.ದೇವರಮನೆ, ಜಿಲ್ಲಾ ಸಂಚಾಲಕ ಮೈಸೂರು ಮಠ ಮುಪ್ಪಯ್ಯ, ಶ್ರೀ ಕಂಠಯ್ಯ ಉಪಸ್ಥಿತರಿದ್ದರು