ಲೋಲಾಕ್ಷಮ್ಮ ಬಿಸ್ತುವಳ್ಳಿ ಗ್ರಾ.ಪಂ. ಅಧ್ಯಕ್ಷೆ

ಲೋಲಾಕ್ಷಮ್ಮ ಬಿಸ್ತುವಳ್ಳಿ ಗ್ರಾ.ಪಂ. ಅಧ್ಯಕ್ಷೆ

ಜಗಳೂರು, ಜ.11- ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲೊಲಾಕ್ಷಮ್ಮ, ಉಪಾಧ್ಯಕ್ಷರಾಗಿ ಗೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

18 ಜನ ಸದಸ್ಯರ ಪೈಕಿ ಸಾಮಾನ್ಯವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಲೊಲಾಕ್ಷಮ್ಮ ಹನುಮಂತಪ್ಪ,  ಪ.ಜಾತಿ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೀತಮ್ಮ ಪರಸಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆ ಅಧಿಕಾರಿಗಳಾಗಿದ್ದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.

ವಿ.ಎಸ್.ಎಸ್.ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಗ್ರಾ.ಪಂ ಮಾಜಿ ಅಧ್ಯಕ್ಷೆ ಬಸಮ್ಮ,ಉಪಾಧ್ಯಕ್ಷೆ ರಶ್ಮಿ, ಸದಸ್ಯರಾದ ಅಂಜಿನಪ್ಪ, ಉಮಾಪತಿ, ರಾಜಣ್ಣ, ಕುಬೇರಪ್ಪ, ಶಂಭುಲಿಂಗಪ್ಪ, ಮಣಿ ಶಶಿನಾಯ್ಕ, ಕೃಷ್ಣಪ್ಪ, ಪಿಡಿಓ ಕೊಟ್ರೇಶ್ ಸೇರಿದಂತೆ ಇತರರು ಇದ್ದರು.