ಚಂಪಾ ನಿಧನಕ್ಕೆ ಹೆಚ್‌ಬಿಎಂ ಸಂತಾಪ

ಚಂಪಾ ನಿಧನಕ್ಕೆ ಹೆಚ್‌ಬಿಎಂ ಸಂತಾಪ

ದಾವಣಗೆರೆ, ಜ.11- ಸಾಹಿತಿ ಪ್ರೊ. ಚಂದ್ರ ಶೇಖರ ಪಾಟೀಲ ಅವರ ನಿಧನಕ್ಕೆ ನಗರದ ಹಿರಿಯ ವ್ಯಂಗ್ಯ ಚಿತ್ರ ಕಾರ  ಹೆಚ್.ಬಿ. ಮಂಜು ನಾಥ್  ಸಂತಾಪ ವ್ಯಕ್ತಪಡಿಸಿದ್ದಾರೆ.

2006ರಲ್ಲಿ  ಶಿವಮೊಗ್ಗದಲ್ಲಿ ಏರ್ಪಾಡಾಗಿದ್ದ ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆಗಾಗಿ ತಮ್ಮನ್ನು ಸನ್ಮಾನಿಸಿ ಗೌರವಿಸುವಾಗ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪಸ್ಥಿತರಿದ್ದರು ಎಂದು ಮಂಜುನಾಥ್ ಸ್ಮರಿಸಿದ್ದಾರೆ.