ಎಸ್ಸೆಸ್, ಎಸ್ಸೆಸ್ಸೆಂರಿಂದ ಆಸ್ಕರ್ ಫರ್ನಾಂಡೀಸ್ ಅಂತಿಮ ದರ್ಶನ

ಎಸ್ಸೆಸ್, ಎಸ್ಸೆಸ್ಸೆಂರಿಂದ ಆಸ್ಕರ್ ಫರ್ನಾಂಡೀಸ್ ಅಂತಿಮ ದರ್ಶನ

ಬೆಂಗಳೂರು, ಸೆ. 16- ಮೊನ್ನೆ ನಿಧನರಾದ ರಾಜ್ಯಸಭಾ ಸದಸ್ಯರೂ ಆದ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥಿವ ಶರೀರವು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಇಂದು ಆಗಮಿಸಿದ ಸಂದರ್ಭದಲ್ಲಿ ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಕೆಪಿಸಿಸಿ ವಕ್ತಾರ ಡಿ.ಬಸವರಾಜ್  ಅವರುಗಳು ಅಂತಿಮ ದರ್ಶನ ಪಡೆದರು.