ಜಿಲ್ಲೆಯಲ್ಲಿ 17 ಪಾಸಿಟಿವ್ ಪ್ರಕರಣ

ದಾವಣಗೆರೆ, ಜು.31- ಜಿಲ್ಲೆಯಲ್ಲಿ ಭಾನುವಾರ 17 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 7, ಹರಿಹರ 4, ಜಗಳೂರು 1 ಹಾಗೂ ಹೊನ್ನಾಳಿ ತಾಲ್ಲೂಕಿನ  5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 336 ಸಕ್ರಿಯ ಪ್ರಕರಣಗಳಿವೆ.

ಇಬ್ಬರಲ್ಲಿ ಬ್ಲಾಂಕ್ ಫಂಗಸ್ ಪತ್ತೆ:  ಜಿಲ್ಲೆಯ ಇಬ್ಬರಲ್ಲಿ ಬ್ಲಾಂಕ್ ಫಂಗಸ್ ಪತ್ತೆಯಾಗಿದ್ದು, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 127 ಜನರು ಬ್ಲಾಕ್ ಫಂಗಸ್‌ಗೆ ತುತ್ತಾಗಿದ್ದರು, ಪ್ರಸ್ತುತ 28 ಸಕ್ರಿಯ ಪ್ರಕರಣಗಳಿವೆ.