ತೊಲಗಿಬಿಡು ವೈರಾಣು…

ತೊಲಗಿಬಿಡು ವೈರಾಣು…

ಸೂರ್ಯನ ಉರಿಬಿಸಿಲಿಗೆ
ಗುಡುಗಿನ ಶಬ್ಧಕ್ಕೆ
ಮಿಂಚಿನ ಆರ್ಭಟಕ್ಕೆ
ಭಯವಿಲ್ಲವೆ ನಿನಗೆ.

ವೈದ್ಯರ ಹರಸಾಹಸಕ್ಕೆ
ರೋಗಿಗಳ ನೋವಿಗೆ
ಆಸ್ಪತ್ರೆಗಳ ಗಿಜಿ ಗಿಜಿಗೆ
ಕಾಳಜಿ ಇಲ್ಲವೆ ನಿನಗೆ.

ದೇವಾಲಯದ ಪೂಜೆಗೆ
ಗಂಟೆ ಜಾಗಟೆಗಳಿಗೆ
ಭಕ್ತರ ಅರ್ಚನೆಗೆ
ಬೆಲೆ ಇಲ್ಲವೆ ನಿನಗೆ.

ಸಾಲು ಸಾಲು ಸಾವುಗಳಿಗೆ
ನೊಂದ ಕುಟುಂಬಗಳಿಗೆ
ಅನುಭವಿಸಿದ ಕಠಿಣ ಘಳಿಗೆ
ಮರುಕವಿಲ್ಲವೆ ನಿನಗೆ.

ಸಾಕು ತೊಲಗಿನ್ನು
ಈ ಜಗವ ಬಿಟ್ಟು
ನಮಗೆಲ್ಲ ನೆಮ್ಮದಿಯ ಕೊಟ್ಟು
ಹಾರಿ ಹೋಗಿಬಿಡು ಮತ್ತೆ ಬಾರದಂತೆ!


ಮಹಾಂತೇಶ ಮಾಗನೂರ
ಬೆಂಗಳೂರು.
mmbaraha@gmail.com