ದಾವಣಗೆರೆ ದಿಳ್ಳೆಪ್ಪನಗಲ್ಲಿ ದುರ್ಗಾಂಬಿಕಾ ದೇವಸ್ಥಾನದ ಬಳಿಯ ನಿವಾಸಿ ಎನ್.ಸಿ.ಸಿ. ನಿವೃತ್ತ ಸಿಬ್ಬಂದಿ ಜಿ.ಎಸ್. ಗುಂಡೂರಾವ್ (78) ಇವರು ದಿನಾಂಕ 16.05.2021ರ ಭಾನುವಾರ ರಾತ್ರಿ 10.30ಕ್ಕೆ ನಿಧನರಾದರು. ಓರ್ವ ಪುತ್ರ, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 17.05.2021ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.