ರೈಲು ಸಂಚಾರ ವಿಸ್ತರಣೆ

ದಾವಣಗೆರೆ, ಮೇ 7 – ನೈರುತ್ಯ ರೈಲ್ವೆ ವಿಭಾಗವು ಹೌರಾ-ಮೈಸೂರು (08117) ಬೇಸಿಗೆ ವಿಶೇಷ ಸೂಪರ್‍ಫಾಸ್ಟ್ ವೀಕ್ಲಿ ಎಕ್ಸ್‍ಪ್ರೆಸ್ ರೈಲು ಸಂಚಾರವನ್ನು ಇಂದಿನಿಂದ ಜೂನ್ 25 ರವರೆಗೆ ಹಾಗೂ ಮೈಸೂರು-ಹೌರಾ (08118) ರೈಲು ಸಂಚಾರ ಸೇವೆಯನ್ನು ನಾಡಿದ್ದು ದಿನಾಂಕ 9 ರಿಂದ ಜೂನ್ 27 ರವರೆಗೆ ವಿಸ್ತರಿಸಿದೆ.

ಯಶವಂತಪುರ-ಹೌರಾ (06597) ಬೇಸಿಗೆ ವಿಶೇಷ ಸೂಪರ್‍ಫಾಸ್ಟ್ ವೀಕ್ಲಿ ರೈಲು ಸಂಚಾರವನ್ನು ಮೇ 13 ರಿಂದ ಜೂ.24 ರವರೆಗೆ ಹಾಗೂ ಹೌರಾ-ಯಶವಂತಪುರ (06598) ರೈಲು ಸಂಚಾರ ಸೇವೆಯನ್ನು ಮೇ 18 ರಿಂದ ಜೂ. 29 ರವರೆಗೆ ವಿಸ್ತರಿಸಿದೆ.

ರೈಲು ಸಂಚಾರ ರದ್ದು ಮುಂದುವರಿಕೆ : ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ – ಗದಗ ಎಕ್ಸ್‍ಪ್ರೆಸ್ (01139) ಜೂನ್ 30 ರವರೆಗೆ ಹಾಗೂ ಗದಗ – ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್ (01140) ರೈಲು ಸಂಚಾರ ರದ್ದು ಜುಲೈ 1 ರವರೆಗೆ ಮುಂದುವರೆಸಲಾಗಿದೆ. 

ಈ ಮೊದಲು ಮೇ  10 ರವರೆಗೆ ರೈಲು ಸಂಚಾರ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published.