ಹಂಸ ಕಲರ್ ಲ್ಯಾಬ್ ಮಾಲೀಕ ಹಂಸರಾಜ್ ಅವರಿಗೆ ಶ್ರದ್ಧಾಂಜಲಿ

ಹಂಸ ಕಲರ್ ಲ್ಯಾಬ್ ಮಾಲೀಕ  ಹಂಸರಾಜ್ ಅವರಿಗೆ ಶ್ರದ್ಧಾಂಜಲಿ

ದಾವಣಗೆರೆ, ಏ.15 – ಅನಾರೋಗ್ಯದಿಂದಾಗಿ ಇಂದು ನಿಧನರಾದ ನಗರದ  ಹಂಸ ಕಲರ್ ಲ್ಯಾಬ್‍ ಮಾಲೀಕ ಹಂಸರಾಜ್ ಅವರಿಗೆ ಛಾಯಾಗ್ರಾಹಕ ಬಳಗದಿಂದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಸಮೀಪದ ಛಾಯಾಗ್ರಾಹಕರ ಸಂಘದ ಕಚೇರಿಯ ಬಳಿ ಮುಂಬತ್ತಿ ಬೆಳಗಿಸುವುದರ ಮೂಲಕ  ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಜಿಲ್ಲಾ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ,  ಫೋಟೋಗ್ರಾಫರ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಾಡಾ ಗಿತ್ತು.  ತಾಲ್ಲೂಕು ಅಧ್ಯಕ್ಷ ಹೆಚ್‍.ಕೆ.ಸಿ. ರಾಜು ಜಿಲ್ಲಾ ಸಂಘದ ಅಧ್ಯಕ್ಷ ವಿಜಯಕುಮಾರ್ ಜಾಧವ್, ಹಿರಿಯ ಛಾಯಾಗ್ರಾಹಕರಾದ ಹೇಮಚಂದ್ರ ಜೈನ್, ಹೆಚ್.ಎಂ.ಪಿ.ಕುಮಾರ್, ಮಂಜುನಾಥ್ ಶಿಕಾರಿ, ಶಂಭು, ತಿಲಕ್, ಪುಟ್ಟರಾಜ್‍, ದುಗ್ಗೇಶ್ ನಾಗರಾಜ್, ಅರುಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.