ವಿಕೋಪ ಬಂದಾಗ ಪ್ರಾಣ ಒತ್ತೆ ಇಟ್ಟು ಕಾಪಾಡುವವರೇ ‘ಫೈರ್‌ಮನ್’

ವಿಕೋಪ ಬಂದಾಗ ಪ್ರಾಣ ಒತ್ತೆ ಇಟ್ಟು ಕಾಪಾಡುವವರೇ ‘ಫೈರ್‌ಮನ್’

ಅಗ್ನಿಶಾಮಕ ದಳದ ಹುತಾತ್ಮರ ದಿನಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ಜಯರಾಮ್

ದಾವಣಗೆರೆ, ಏ. 15 – ರಾಜ್ಯ ಸೇರಿದಂತೆ ಪ್ರಪಂಚದಲ್ಲಿ ವಿಕೋಪಗಳು ಬಂದಾಗ ಪ್ರಾಣ ಒತ್ತೆ ಇಟ್ಟು, ಇನ್ನೊಬ್ಬರ ಪ್ರಾಣ ಕಾಪಾಡುವವರೇ ಫೈರ್‌ಮನ್ ಎಂದು ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಜಯರಾಮ್ ಹೇಳಿದರು.

ನಗರದಲ್ಲಿನ ಅಗ್ನಿಶಾಮಕ ಇಲಾಖೆಯಲ್ಲಿ ಬುಧವಾರ ನಡೆದ ಅಗ್ನಿಶಾಮಕ ದಳದ ಹುತಾತ್ಮ ದಿನಾಚರಣೆಯಲ್ಲಿ ಗೌರವ ವಂದನೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಅಗ್ನಿಶಾಮಕ ಠಾಣೆಗಳಲ್ಲಿ ಏಪ್ರಿಲ್-14 ರಂದು ದಿಟ್ಟತನ, ತ್ಯಾಗ, ಬಲಿದಾನವನ್ನು ಮರೆತು ಕರ್ತವ್ಯದಲ್ಲಿ ಮಡಿದವರ ಸ್ಮರಣಾರ್ಥವಾಗಿ ಅಗ್ನಿಶಾಮಕ ಸೇವಾ ಸಪ್ತಾಹ ಏರ್ಪಡಿಸಲಾಗಿದೆ. ಅಂತೆಯೇ ಇಲ್ಲಿ ಹುತಾತ್ಮ ದಿನಾಚರಣೆ ಮಾಡಲಾಗಿದೆ ಎಂದರು. 

ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಭಾವನಾತ್ಮಕ ಮತ್ತು ಮಾನಸಿಕ ಭದ್ರತೆ ಒದಗಿಸಲು ಸಾಮಾಜಿಕ ಚಿಂತಕರು ಪ್ರಯತ್ನಶೀಲರಾಗಬೇಕು. ಜೊತೆಗೆ ಸಾರ್ವಜನಿಕರು ಇನ್ನೂ ಹೆಚ್ಚಿನದಾಗಿ ಅಗ್ನಿಶಾಮಕ ಇಲಾಖೆಗೆ ಪ್ರೋತ್ಸಾಹ, ಸಹಕಾರ ನೀಡುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.

Leave a Reply

Your email address will not be published.