ವಿಕಲಚೇತನರ ದತ್ತಾಂಶ ಸಂಗ್ರಹಕ್ಕೆ ಮಾಹಿತಿ ನೀಡಿ

ದಾವಣಗೆರೆ, ಏ. 15- ಕರ್ನಾಟಕ ಸರ್ಕಾರ ಇ-ಗೌರ್ನೆನ್ಸ್ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ವತಿಯಿಂದ ಕೌಟುಂಬಿಕ ದತ್ತಾಂಶ ಯೋಜನೆಯಡಿ ಜಿಲ್ಲೆಯ ವಿಕಲಚೇತನರ ಡಾಟಾ ಎಂಟ್ರಿ ಮಾಡಿಸುವುದು ಕಡ್ಡಾಯವಾಗಿದ್ದು, ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಈಗಾಗಲೇ 16,000 ವಿಕಲಚೇತನರ ಡಾಟಾ ಎಂಟ್ರಿ ಮಾಡಲಾಗಿದೆ. ಅದರಂತೆ ಚನ್ನಗಿರಿ ಪುರಸಭೆ ವ್ಯಾಪ್ತಿಯಲ್ಲಿ ಯು.ಆರ್.ಡಬ್ಲ್ಯೂ ಹುದ್ದೆ ಖಾಲಿ ಇದ್ದ ಕಾರಣ ಡಾಟಾ ಎಂಟ್ರಿ ಆಗಿರುವುದಿಲ್ಲ. ಹೀಗಾಗಿ ಇದೇ ದಿನಾಂಕ 14 ರಿಂದ ಆರಂಭಗೊಂಡಿದ್ದು, ದಿನಾಂಕ 17 ರವರೆಗೆ ಡಾಟಾ ಎಂಟ್ರಿ ಮಾಡಲು ಅವಶ್ಯವಿರುವ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಸಂಗ್ರಹಿಸಲು 20 ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಮತ್ತು ಯು.ಆರ್.ಡಬ್ಲ್ಯೂ ಪುನರ್‍ವಸತಿ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಚನ್ನಗಿರಿ ಪುರಸಭೆಯ ವ್ಯಾಪ್ತಿಯ ಎಲ್ಲಾ ವಿಕಲಚೇತನರು ಈ ಮಾಹಿತಿಯನ್ನು ನೀಡಿ ಸಹಕರಿಸಲು ಕೋರಿದೆ.  ವಿಕಲಚೇತನರಿಗೆ ಸಂಬಂಧಿಸಿದ ದತ್ತಾಂಶ ದಾಖಲು ಮಾಡಿಸದೇ ಇದ್ದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತದೆ.

ಮಾಹಿತಿಗಾಗಿ ಕೆ. ಸುಬ್ರಮಣ್ಯಂ, ಎಂ.ಆರ್.ಡಬ್ಲ್ಯೂ, (99457 38141) ಇವರಿಗೆ ಸಂಪರ್ಕಿಸಬಹುದು ಅಥವಾ ವಿಕಲಚೇತನರ ಸಹಾಯವಾಣಿ ಅಥವಾ ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published.