ತುಪ್ಪದಹಳ್ಳಿ ಕೆರೆ ಹೂಳು ತೆಗೆಯಲು 8 ಕೋಟಿ ರೂ. ಮಂಜೂರು

ತುಪ್ಪದಹಳ್ಳಿ ಕೆರೆ ಹೂಳು ತೆಗೆಯಲು 8 ಕೋಟಿ ರೂ. ಮಂಜೂರು

ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ನೀರು ಹರಿಯುವ ಸಂದರ್ಭದಲ್ಲಿ  ತರಳಬಾಳು ಶ್ರೀಗಳು ಭೇಟಿ ನೀಡಿದ್ದ ಚಿತ್ರ.

ತರಳಬಾಳು ಶ್ರೀಗಳ ಪರಿಶ್ರಮಕ್ಕೆ ಸ್ಥಳೀಯರ ಮೆಚ್ಚುಗೆ

ಸಿರಿಗೆರೆ, ಏ.16 -ಜಗಳೂರು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಬರುವ ತುಪ್ಪದಹಳ್ಳಿ ಕೆರೆಯ ಹೂಳು ತೆಗೆಸಲು 5 ಕೋಟಿ ರೂ. ಮತ್ತು ಏರಿಯನ್ನು ಸದೃಢ ಪಡಿಸಲು 3 ಕೋಟಿ ರೂ. ಸೇರಿ ಒಟ್ಟು 8 ಕೋಟಿ ರೂ. ಗಳನ್ನು ಸರ್ಕಾರ ಮಂಜೂರು ಮಾಡಿದೆ. ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಪರಿಶ್ರಮದಿಂದ ಕರ್ನಾಟಕ ನೀರಾವರಿ ನಿಗಮದಿಂದ ಈ ಅನುದಾನ ಮಂಜೂರಾಗಿದೆ.

ಶ್ರೀಗಳ ಕಾರ್ಯಕ್ಕೆ ಜಗಳೂರು ತಾಲ್ಲೂಕಿನ ಜನತೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.