ಕೋವಿಡ್ : ನಗರದಲ್ಲಿ ಲಸಿಕೆ ಅಭಿಯಾನ ಆರಂಭ

ಕೋವಿಡ್ : ನಗರದಲ್ಲಿ  ಲಸಿಕೆ ಅಭಿಯಾನ ಆರಂಭ

ದಾವಣಗೆರೆ, ಏ. 15- ಲಯನ್ಸ್ ಕ್ಲಬ್  ಹಾಗೂ ನಗರ ಆರೋಗ್ಯ ಕೇಂದ್ರ-1,ದೊಡ್ಡ ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಭವನ(ಶಾಲೆ)ಯಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮ ಇಂದು ಆರಂಭವಾಯಿತು.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರ ಪರವಾಗಿ ಅವರ ಪತಿ – ಕಾಂಗ್ರೆಸ್ ಮುಖಂಡ ಉಮೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅದ್ಯಕ್ಷ ಎಸ್. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಆರೋಗ್ಯ ಅಧಿಕಾರಿ ಸುರೇಶ್, ಆರ್. ಜಿ.ಶೀನಿವಾಸಮೂರ್ತಿ, ಬೆಳ್ಳೂಡಿ   ಶಿವಕುಮಾರ್, ಎಸ್. ಜಿ.ಉಳುವಯ್ಯ,  ಮಹಾಂತೇಶ್ ವಿ. ಒಣರೊಟ್ಟಿ, ಬಿ.ಎಸ್. ಶಿವಾನಂದ್,  ಎಸ್.ಕೆ. ಮಲ್ಲಿಕಾರ್ಜುನ, ಟಿ.ಎಸ್. ಸುಬ್ಬುರಾಜ್, ವೈ.ಬಿ. ಸತೀಶ್, ಜೆ.ಓ. ವಿನಾಯಕ ,  ಭಾವಿಕಟ್ಟಿ ಜಗದೀಶ್, ಹೆಚ್.ಕೆ. ಹೇಮಣ್ಣ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು. 

ಈ ಶಿಬಿರವನ್ನು ಪ್ರತಿ  ಎರಡು ದಿನಕೊಮ್ಮೆ ಲಯನ್ಸ್ ಭವನದಲ್ಲಿ ನಡೆಸಲಾಗುವುದು. ತಾವುಗಳು ಬರುವಾಗ ಆಧಾರ್ ಕಾರ್ಡ್ ತಪ್ಪದೇ ತರಬೇಕು ಎಂದು ಆರೋಗ್ಯ ಕೇಂದ್ರದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published.