ಅಂಬಿಗರ ಚೌಡಯ್ಯ ಪೀಠದಲ್ಲಿ ಯುಗಾದಿ, ಅಂಬೇಡ್ಕರ್ ಜಯಂತಿ

ಅಂಬಿಗರ ಚೌಡಯ್ಯ ಪೀಠದಲ್ಲಿ ಯುಗಾದಿ, ಅಂಬೇಡ್ಕರ್ ಜಯಂತಿ

ರಾಣೇಬೆನ್ನೂರು, ಏ.14- ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದಿಂದ ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲ್ಲೂಕು ಶ್ರೀ ಅಂಬಿಗರ ಚೌಡಯ್ಯ ಗುರು ಪೀಠದಲ್ಲಿ ಪ್ಲವ ನಾಮ ಸಂವತ್ಸರದ ಚಾಂದ್ರಮಾನ ಯುಗಾದಿ ಹಾಗೂ ಭಾರತ ರತ್ನ, ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಆಚರಿಸಲಾಯಿತು.

ಸಮಾರಂಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ಭಗೀರಥ ಗುರುಪೀಠದ ಜಗದ್ಗುರು ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಅಧ್ಯಕ್ಷರಾದ ಶ್ರೀ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಖಜಾಂಚಿ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕಾರ್ಯದರ್ಶಿ ಶ್ರೀ ಕುಂಚಿಟಿಗ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ. ಶಾಂತವೀರ ಸ್ವಾಮೀಜಿ, ಪ್ರ. ಸಂಚಾಲಕರಾದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಉಪಾಧ್ಯಕ್ಷರಾದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಗುರು ಪೀಠದ ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಶ್ರೀ ಕುಂಬಾರ ಗುರುಪೀಠದ ಜಗದ್ಗುರು ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಹಡಪದ ಅಪ್ಪಣ್ಣ ಗುರುಪೀಠದ ಜಗದ್ಗುರು
ಶ್ರೀ ಅಪ್ಪಣ್ಣ ಭಾರತೀ ಸ್ವಾಮೀಜಿಗಳು ಪಾಲ್ಗೊಂಡಿದ್ದು, ಗೌರವ ಸಲ್ಲಿಸಿದರು.

Leave a Reply

Your email address will not be published.