ಕಣ್ಣು ಇಲ್ಲದೆ ಜೀವನ ಕಷ್ಟ : ಸಂಸದ ದೇವೇಂದ್ರಪ್ಪ

ಕಣ್ಣು ಇಲ್ಲದೆ ಜೀವನ ಕಷ್ಟ : ಸಂಸದ ದೇವೇಂದ್ರಪ್ಪ

ಹರಪನಹಳ್ಳಿ, ಏ.11- ಮನುಷ್ಯನ ಅಂಗಗಳಲ್ಲಿ ಕಣ್ಣು ಅತಿ ಮುಖ್ಯವಾಗಿದ್ದು, ಕಣ್ಣು ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

ತಾಲ್ಲೂಕಿನ ಅರಸಿಕೇರಿ ಗ್ರಾಮದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯ ನಾನಾ ತರಹದ ಒತ್ತಡದ ಕೆಲಸಗಳಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸದೆ ನಾನಾ ತರಹದ ರೋಗಗಳಿಗೆ ತುತ್ತಾಗುತ್ತಿದ್ದು, ಅದರಲ್ಲೂ ಪೊಲೀಸ್ ಸಿಬ್ಬಂದಿಗಳು ಬಿಡುವಿಲ್ಲದೆ ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿಮ್ಮಲ್ಲಿಗೆ ಬಂದಿರುವ ಕಠಾರೆ ಐ ಆಪ್ಟಿಕಲ್ಸ್ ಕಂಪನಿ ವತಿಯಿಂದ ಎಲ್ಲಾ ಪೊಲೀಸ್ ಸಿಬ್ಬಂದಿ ಗಳಿಗೆ, ಅವರ ಕುಟುಂಬದವರಿಗೆ ಉಚಿತ ಕಂಪ್ಯೂ ಟರ್ ತಪಾಸಣೆ ಮಾಡುತ್ತಿದ್ದು, ಪ್ರತಿಯೊಬ್ಬ ಪೊಲೀಸರು ಈ ಸೌಲಭ್ಯ ಪಡೆದುಕೊಂಡು  ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.

ಈ ವೇಳೆ  ಪಿಎಸ್ಐ ಕಿರಣ್‌ಕುಮಾರ್, ಮುಖಂಡ ಯರಬಳ್ಳಿ ಉಮಾಪತಿ, ವೈದ್ಯಾಧಿಕಾರಿ ಮೋಹನ್, ಓಂಪ್ರಕಾಶ್, ಹರ್ಷವರ್ಧನ್, ವಿಶ್ವನಾಥ್, ಷಣ್ಮುಖಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು  ಹಾಜರಿದ್ದರು.

Leave a Reply

Your email address will not be published.