ಮೊದಲಿದ್ದ ಹಾಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಿ

ಮಾನ್ಯರೇ,

ಮಂಡಿಪೇಟೆಯ ವ್ಯಾಪಾರಸ್ಥರಾದ ನಾವುಗಳು ಸುಮಾರು 50 ವರ್ಷಗಳಿಂದ ಇಲ್ಲಿ ವ್ಯವಹಾರ ನಡೆಸುತ್ತಾ ಬಂದಿದ್ದೇವೆ.

ಇಲ್ಲಿ  ಮೊದಲು ಎರಡೂ ಕಡೆ ದಿನ ಬಿಟ್ಟು ದಿನ ಪಾರ್ಕಿಂಗ್ ವ್ಯವಸ್ಥೆ ಇತ್ತು. ನಂತರ ಸ್ಮಾರ್ಟ್ ಸಿಟಿಯ ಕೆಲಸ ಕಾರ್ಯಗಳು ಶುರುವಾದವು. ಅವುಗಳನ್ನು ಮುಗಿಸಲು ಸುಮಾರು ಎರಡು ವರ್ಷ ತೆಗೆದುಕೊಂಡರು. ನಂತರ ಒಂದೇ ಕಡೆ ಪಾರ್ಕಿಂಗ್ ಮಾಡಿದರು.

ಕಾರು ಪಾರ್ಕಿಂಗ್ ತೀರಾ ಮುಂದುಗಡೆ ಮಾಡಿದ್ದಾರೆ. ಮೊದಲು ಎರಡು ಜಾಗದಲ್ಲಿ ಕಾರ್‌ ಪಾರ್ಕಿಂಗ್ ವ್ಯವಸ್ಥೆ ಇತ್ತು. ಈ ಬಗ್ಗೆ ನಾವೆಲ್ಲಾ ಸೇರಿ ಡಿ.ಸಿ. ಅವರಿಗೆ, ಸಂಚಾರಿ ಪೊಲೀಸ್‌ನವರಿಗೆ ಹಾಗೂ ಸ್ಮಾರ್ಟ್‌ಸಿಟಿಯವರಿಗೆ ಲಿಖಿತ ರೂಪದಲ್ಲಿ ಮನವಿ ನೀಡಿದ್ದೆವು. ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ದಯಮಾಡಿ ಎರಡೂ ಬದಿ ದಿನ ಬಿಟ್ಟು ದಿನದ ಹಾಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾರ್‌ ಪಾರ್ಕಿಂಗನ್ನು ಆನಂದ್ ಹಾರ್ಡ್‌ವೇರ್ಸ್ ಮತ್ತು ಪೇಂಟ್ಸ್ ಮುಂಭಾಗದಿಂದ 6 ರಿಂದ 8 ಚಕ್ರದ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ.


– ಮಂಡಿಪೇಟೆ ವ್ಯಾಪಾರಸ್ಥರು, ದಾವಣಗೆರೆ.

Leave a Reply

Your email address will not be published.