ಮಾಸ್ಕ್ : ನಿಯಮ ನಿರ್ಲಕ್ಷಿಸಿದರೆ ಕ್ರಮ

ಮಾಸ್ಕ್ : ನಿಯಮ ನಿರ್ಲಕ್ಷಿಸಿದರೆ ಕ್ರಮ

ತಹಶೀಲ್ದಾರ್ ಎಸ್. ಮಹಾಬಲೇಶ್ವರ

ಕೂಡ್ಲಿಗಿ, ಏ.7- ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಹಾಗೂ ನಿಯಮ ಪಾಲನೆ ಕಡ್ಡಾಯ ಎಂಬುದಾಗಿ ಧ್ವನಿವರ್ಧಕದ ಮೂಲಕ ಸಂದೇಶ ರವಾನಿ ಸುತ್ತಾ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ತಹಶೀಲ್ದಾರ್ ಎಸ್. ಮಹಾಬಲೇಶ್ವರ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಕೊರೊನಾ 2ನೇ ಅಲೆಯ ಕುರಿತು ಜಾಗೃತಿ, ಮಾಸ್ಕ್, ಸ್ಯಾನಿಟೈಜೇಷನ್‌ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದಲ್ಲಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ,  ವೃತ್ತಗಳಲ್ಲಿ  ನಾಗರಿಕರಿಗೆ ಕೊರೊನಾ ಬಗ್ಗೆ  ಅರಿವು  ಮೂಡಿಸಿದರು.

Leave a Reply

Your email address will not be published.