ಮಲೇಬೆನ್ನೂರಿನಲ್ಲಿ ಬಾಬೂಜೀ ಜಯಂತಿ

ಮಲೇಬೆ ನ್ನೂರು, ಏ.7- ಸ್ಥಳೀಯ ಪುರಸಭೆ ಮತ್ತು ನಾಡ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ 114ನೇ ಜಯಂತಿಯನ್ನು ಆಚರಿಸಲಾಯಿತು.

ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯ ಕುಮಾರ್, ಮುಖ್ಯಾಧಿಕಾರಿ ದಿನಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಸದಸ್ಯರಾದ ಬಿ.ಎಂ. ಚನ್ನೇಶ್ ಸ್ವಾಮಿ, ಬಿ. ಸುರೇಶ್, ಮಹಾಲಿಂ ಗಪ್ಪ, ಮಾಸಣಗಿ ಶೇಖರಪ್ಪ, ಪಿ.ಆರ್. ರಾಜು, ಜಿ.ಹೆಚ್. ಮಂಜಪ್ಪ, ಭೋವಿಕುಮಾರ್ ಹಾಗೂ ಅಧಿಕಾರಿಗಳು ಜಗಜೀವನ್ ರಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಕೊಟ್ರೇಶ್, ಸುಭಾನಿ, ಕಚೇರಿಯ ಪುಷ್ಪಾ ಹಿರೇಮಠ್, ಬಸವರಾಜ್, ಪ್ರದೀಪ್, ಅಂಜಿನಪ್ಪ ಹಾಜರಿದ್ದರು.

Leave a Reply

Your email address will not be published.