24ನೇ ವಾರ್ಡ್ ನಲ್ಲಿ ಬಿಜೆಪಿ ಸಂಸ್ಥಾಪನಾ ದಿನ

24ನೇ ವಾರ್ಡ್ ನಲ್ಲಿ ಬಿಜೆಪಿ ಸಂಸ್ಥಾಪನಾ ದಿನ

ದಾವಣಗೆರೆ, ಏ.6 – ಬಿಜೆಪಿಯ ಸಂಸ್ಥಾಪನಾ ದಿನವನ್ನು 24ನೇ ವಾರ್ಡಿನ ಶಕ್ತಿ ಕೇಂದ್ರದಲ್ಲಿ ಬಿಜೆಪಿ ಪ್ರಮುಖರಿಂದ ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ಅಭಿವೃದ್ಧಿಯ ಮನ್ವಂತರಕ್ಕೆ ಸುಭದ್ರ ಬುನಾದಿ ಹಾಕಿದ ಬಿಜೆಪಿ ಹಿರಿಯ ಮುಖಂಡರಾದ ಎನ್ ಟಿ ಚಂದ್ರಶೇಖರಪ್ಪ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ಪ್ರಕೋಷ್ಟಗಳ ಪ್ರಮುಖ  ಡಾ. ಶಿವಯೋಗಿಸ್ವಾಮಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಸುಧಾ ಜಯರುದ್ರೇಶ್, 24ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಕೆ., ಮಹಾ ಶಕ್ತಿಕೇಂದ್ರ ಪ್ರಮುಖ ಪದ್ಮನಾಭ ಶೆಟ್ಟಿ, ಬಿಜೆಪಿ ಮುಖಂಡರಾದ ಜಯರುದ್ರೇಶ್, ಏಕನಾಥ್ ರಾಯ್ಕರ್, ಜಯಣ್ಣ, ಶಕ್ತಿಕೇಂದ್ರದ ಪ್ರಮುಖರಾದ ಕಿರಣ್ ಹಾಗೂ ಶೇಖರ್ ಉಪ್ಪಿನ್, ಬೂತ್ ಅಧ್ಯಕ್ಷರಾದ ಸಿದ್ಧಲಿಂಗೇಶ್, ಸೋಹನ್, ಮಧು, ಜಿತೇಂದ್ರ, ಅನಿಲ್, ವಿನಯ್, ರೇಣುಕಾ ಪ್ರಸನ್ನ, ಪವನ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್, ಪದಾಧಿಕಾರಿಗಳಾದ ವಿವೇಕ್, ಕಾರ್ತಿಕ್, ರಘು ತೊಗಟೆ, ಲಿಂಗರಾಜ್, ಕಿರಣ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.