ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ : ಪ್ರಸಾದ ವಿನಿಯೋಗ

ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ : ಪ್ರಸಾದ ವಿನಿಯೋಗ

ದಾವಣಗೆರೆ, ಏ.1- ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಇಂದು ಸಂಜೆ ತ್ರಿವಿಧ ದಾಸೋಹಿ ನಡೆದಾಡುವ ದೇವರು  ಪದ್ಮಭೂಷಣ ಡಾ. ಶಿವಕುಮಾರ ಸ್ವಾಮಿಗಳ ಜನ್ಮ ದಿನಾಚರಣೆ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕಗಳ ಸಹಯೋಗದಲ್ಲಿ ಶ್ರೀಗಳನ್ನು ಸ್ಮರಿಸಲಾಯಿತು. ಸ್ಮರಣಾರ್ಥವಾಗಿ ಪ್ರಸಾದ ವಿನಿಯೋಗ ಮಾಡಲಾಯಿತು. 

ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಟಿಂಕರ್ ಮಂಜಣ್ಣ , ಎಂ.ವಿ. ಜಯಪ್ರಕಾಶ್ ಮಾಗಿ, ಟಿ.ಎಸ್. ಮಲ್ಲಿಕಾರ್ಜುನ್, ನಾಗರಾಜ್ ಅಂಗಡಿ, ಶಿವನಾಂದ್,  ಗುರು,  ಮಹಿಳಾ ನಗರ ಘಟಕದ ಅಧ್ಯಕ್ಷೆ ಪುಷ್ಪ ವಾಲಿ,  ಪ್ರಧಾನ ಕಾರ್ಯದರ್ಶಿ ಮಂಗಳ ಕರಿಬಸವರಾಜ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ರಾಕ್ಷಾಯಣಮ್ಮ,  ಶೋಭ ಕೊಟ್ರೇಶ್, ಸುಮ ಮಲ್ಲಿಕಾರ್ಜುನ್‍, ನಾಗಮಣಿ ಹಂಪಾಳಿ ಸೇರಿದಂತೆ ಇತರರು  ಭಾಗವಹಿಸಿದ್ದರು.

Leave a Reply

Your email address will not be published.