ತೋಳಹುಣಸೆ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷರಾಗಿ ನಿಂಗಪ್ಪ ಆಯ್ಕೆ

ದಾವಣಗೆರೆ, ಏ.1- ತಾಲ್ಲೂಕಿನ ತೋಳಹುಣಸೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎಸ್‌. ನಿಂಗಪ್ಪ ವಡ್ಡಿನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಆರ್‌. ರಮೇಶ್‌ ಕರ್ತವ್ಯ ನಿರ್ವಹಿಸಿದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ವಿ. ಪ್ರಶಾಂತ್‌, ನಿರ್ದೇಶಕರಾದ ಪುಷ್ಪ ದೇವೇಂದ್ರಪ್ಪ, ಜಿ.ಸಿ. ವೀರೇಂದ್ರ, ಮಹಾದೇವಯ್ಯ, ರೇವಣಸಿದ್ದಪ್ಪ, ಜಿ.ಎಂ. ಹಾಲಪ್ಪ, ಟಿ. ಬಾಲಕೃಷ್ಣ, ಶೇಖರಪ್ಪ ಗೌಡ್ರು, ಎ.ಕೆ. ನಿಂಗಪ್ಪ, ಜಯ್ಯಮ್ಮ ಉಪಸ್ಥಿತರಿದ್ದರು.

Leave a Reply

Your email address will not be published.