ಮೊಬೈಲ್‌ ಟವರ್‍ ಸ್ಥಾಪನೆಗೆ ಆಕ್ಷೇಪ

ಮಾನ್ಯರೇ,

ದಾವಣಗೆರೆಯ ಮಿಲ್ಲತ್‍ ಕಾಲೋನಿಯ ರಿಂಗ್‍ ರೋಡ್‍ 4ನೇ ವಾರ್ಡ್‍ ಎಸ್.ಎಸ್‍. ಶಾದಿ ಮಹಲ್ ಪಕ್ಕದ ಹಸೀನಾ ಬಾನು ಅವರ ಆರ್‍.ಸಿ.ಸಿ. ಮನೆಯ ಮೇಲೆ ಮೊಬೈಲ್‍ ಟವರ್‌ ಸ್ಥಾಪನೆ ಮಾಡುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಮೊಬೈಲ್‍ ಟವರ್‍ ಸ್ಥಾಪನೆಗೆ ಎನ್‍ಒಸಿ ತರಲು ಟ್ರಾಯ್‍ ಆದೇಶಿಸಿದೆ. ಆದರೆ ಎನ್‍ಒಸಿ ಇಲ್ಲದೇ, ಸ್ಥಳೀಯರು ಸಮ್ಮತಿ ಕೂಡ ಇಲ್ಲದೇ ರಿಲಾಯನ್ಸ್ ಜಿಯೋ ಕಂಪನಿಯವರು ನಿಯಮ ಉಲ್ಲಂಘಿಸಿ ಹೈ ಆಕ್ಸಿಲಿರೇಷನ್‍ ಮೊಬೈಲ್‍ ಟ್ರಾನ್ಸ್‍ ಮಿಷನ್‍ ಟವರ್‍ಗಳನ್ನು ಕೂರಿಸುತ್ತಿದ್ದಾರೆ. ಇದು ಅಕ್ಷಮ್ಯನ ಅಪರಾಧವಾಗಿದೆ. ಮೊಬೈಲ್‍ ಟವರ್‍ಗಳಿಂದ ಹೊರಹೊಮ್ಮುವ ತರಂಗಗಳಿಂದ ಪಶು, ಪಕ್ಷಿಗಳ ಜೀವಕ್ಕೆ ಹಾನಿಯಾಗಲಿದೆ. ಇದರಿಂದ ಜನರಿಗೂ ತೊಂದರೆಯಾಗುವ ಕಾರಣ ಟವರ್‍ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸಿ, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸ್ವಲ್ಪ ದಿನ ಮುಂದೂಡಿದ್ದರು. ಪುನಃ ಟವರ್‍ ಸ್ಥಾಪನೆಗೆ ಸಿದ್ದತೆ ನಡೆಯುತ್ತಿದ್ದು, ಟವರ್‍ನಿಂದಾಗುವ ತೊಂದರೆ ತಪ್ಪಿಸಿ ಜನರನ್ನು  ರೋಗಗಳಿಂದ ಮುಕ್ತರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.


– 4ನೇ ವಾರ್ಡ್‍ ನಾಗರಿಕರು, ದಾವಣಗೆರೆ.

Leave a Reply

Your email address will not be published.