ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳದ ವಿಸ್ತರಣೆ ಅತ್ಯವಶ್ಯ

ಮಾನ್ಯರೇ,

ದಾವಣಗೆರೆ ರೈಲು ನಿಲ್ದಾಣದ ವರಮಾನವು, ಮೈಸೂರು ಡಿವಿಜನ್‌ನಲ್ಲಿ ಮೈಸೂರಿನ ನಂತರ 2ನೇ ಸ್ಥಾನದಲ್ಲಿದೆ.

ನಮ್ಮ ಸಂಸದರ ಪ್ರಯತ್ನದಿಂದ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಅನೇಕ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಹಳೆಯ ಕಟ್ಟಡವಿದ್ದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು ಮುಕ್ತಾಯದ ಹಂತದಲ್ಲಿದೆ. ರಾಂಪ್‌ ಮಾದರಿ ಹೊಸ ಫುಟ್‌ಬ್ರಿಡ್ಜ್, ಎಸ್ಕಲೇಟರ್ ಅಳವಡಿಕೆ, ಫ್ಲಾಟ್‌ಫಾರಂಗಳ ವಿಸ್ತರಣೆ, ಹೆಚ್ಚಿನ ಶೆಲ್ಟರ್‌ಗಳ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಹಳೇ ನಗರದ ಪ್ರಯಾಣಿಕರು ನಿಲ್ದಾಣ ತಲುಪಲು ಒಳ್ಳೆಯ ವ್ಯವಸ್ಥೆ ಮಾಡಲಾ ಗಿದೆ.ಈ ಭಾಗದಲ್ಲೂ ಒಂದನೇ ಫ್ಲಾಟ್‌ ಫಾರಂನಲ್ಲಿರುವಂತೆ ಎಲ್ಲಾ ಸವಲತ್ತುಗಳಿ ರುವ ಒಂದು ಭವ್ಯ ಕಟ್ಟಡದ ವ್ಯವಸ್ಥೆಯ ಅವಶ್ಯಕತೆ ಇರುವಂತೆ ಮಾಡಬೇಕಿದೆ. ಆದರೂ ರೈಲ್ವೇ ನಿಲ್ದಾಣಕ್ಕೆ ವಾಹನ ಪಾರ್ಕಿಂಗ್ ವ್ಯವಸ್ಥೆ ಏನೇನೂ ಸಾಲದಾ ಗಿದ್ದು, ನಾಲ್ಕು ಚಕ್ರಗಳ ವಾಹನಗಳಿಗೆ ಅವಕಾಶವೇ ಇಲ್ಲದಿರುವುದು ವಿಷಾದ ನೀಯ. ಸ್ಥಳದ ಅಭಾವ ಇರುವುದರಿಂದ ಪಕ್ಕದಲ್ಲಿರುವ ಎ.ಸಿ. ಆಫೀಸ್ ಕಟ್ಟಡ ಮತ್ತು ಪೂರ್ಣ ಆವರಣವನ್ನು ವಾಹನ ಪಾರ್ಕಿಂಗ್‌ಗೆ ಉಪಯೋಗ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವೇ ಇರುವುದಿಲ್ಲ. 

ಬ್ರಿಟೀಷರ ಕಾಲದ ಈ ಆಫೀಸನ್ನು ಹೊಸ ತಾಲ್ಲೂಕು ಕಚೇರಿಗೋ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೋ ಸ್ಥಳಾಂತರಿಸಬಹುದಾಗಿದೆ.
ಈ ಕುರಿತು ಸಂಸದರು ಗಮನ ಹರಿಸಿದರೆ ಕಾರ್ಯ ಸುಲಲಿತವಾಗಲಿದೆ.


– ಜಿ.ಬಿ. ಸದಾಶಿವಪ್ಪ, ನಿವೃತ್ತ ಇಂಜಿನಿಯರ್, ದಾವಣಗೆರೆ.

Leave a Reply

Your email address will not be published.