ಕೊರೊನಾ ಕಾರ್ಖಾನೆಗಳಂತಾಗದಿರಲಿ ಶಾಲಾ – ಕಾಲೇಜುಗಳು…

ಮಾನ್ಯರೇ,

ಇತ್ತೀಚೆಗೆ ಉಡುಪಿಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿಯೇ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಮಲ್ಲೇಶ್ವರಂನ ಹಾಸ್ಟೆಲ್‌ನಲ್ಲಿ ಹದಿನೈದಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೋವಿಡ್ ದೃಢವಾಗಿತ್ತು.  ಸರ್ಕಾರ ಅವಶ್ಯವಿದ್ದರೆ ಈಗಿನಿಂದಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು ಒಳಿತು, ಸರ್ಕಾರ ಹೀಗೆಯೇ ಭಂಡತನ ಮತ್ತು ಜಾಣ ಕುರುಡು ಪ್ರದರ್ಶಿಸಿದರೆ ಭವಿಷ್ಯದಲ್ಲಿ ಹೀಗೆಯೇ ಸೋಂಕು ಮುಂದುವರೆದರೆ ಶಾಲಾ-ಕಾಲೇಜುಗಳು ಕೊರೊನಾ ಕಾರ್ಖಾನೆಗಳಾಗುವುದರಲ್ಲಿ ಯಾವುದೇ  ಅನುಮಾನವಿಲ್ಲ. ರಾಜ್ಯ ಸರ್ಕಾರ ಈಗಿನಿಂದಲೇ  ಜವಾಬ್ದಾರಿಯುತವಾದ ನಿರ್ಧಾರ ತೆಗೆದುಕೊಂಡು ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಸಮಯಪ್ರಜ್ಞೆ ಮೆರೆಯಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾದೀತು ಎಚ್ಚರ. 


– ಮುರುಗೇಶ ಡಿ., ದಾವಣಗೆರೆ.

Leave a Reply

Your email address will not be published.