ವಿಧಾನಸೌದ ಚಲೋಗೆ ಪ್ರತಿ ತಾಲ್ಲೂಕಿನಿಂದ 500 ರೈತರು ಭಾಗಿ : ರೈತರ ಸಭೆಯಲ್ಲಿ ನಿರ್ಧಾರ

ವಿಧಾನಸೌದ ಚಲೋಗೆ ಪ್ರತಿ ತಾಲ್ಲೂಕಿನಿಂದ  500 ರೈತರು ಭಾಗಿ : ರೈತರ ಸಭೆಯಲ್ಲಿ ನಿರ್ಧಾರ

ದಾವಣಗೆರೆ, ಮಾ.15- ನಗರದ ಎಪಿಎಂಸಿ ಯಾರ್ಡ್ ನಲ್ಲಿ ಇಂದು ರೈತರ ಸಭೆ ನಡೆಸಿ, ರೈತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಕಾನೂನುಗಳ ವಿರುದ್ದ ದೊಡ್ಡ ಹೋರಾಟ ದೇಶದಾದ್ಯಂತ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಮಾರ್ಚ್ 22ರಂದು ಸಂಯುಕ್ತ ಹೋರಾಟ ಕರ್ನಾಟಕ, ಐಕ್ಯ ಹೋರಾಟ ಕರ್ನಾಟಕ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ವಿಧಾನಸೌಧ ಚಲೋಗೆ ಪ್ರತಿ ತಾಲ್ಲೂಕಿನಿಂದ 500 ಮಂದಿ ರೈತರು ಬರಲು ನಿರ್ಧರಿಸಲಾಯಿತು.

ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲಾ ಸಂಘಟನೆಗಳ ಮುಖಂಡರು ಭಾಗವಹಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜೆ.ಎಂ ವೀರಸಂಗಯ್ಯ, ರವಿಕುಮಾರ್ ಬಲ್ಲೂರು, ಅಮ್ಜದ್ ಪಾಶ, ಎನ್.ಡಿ. ವಸಂತಕುಮಾರ, ಕೆ.ಎಸ್. ಪ್ರಸಾದ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.