ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಬೇಡ : ಉತ್ತರ ವಲಯ ಬಿಇಓ ಕೊಟ್ರೇಶ್‌

ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಬೇಡ : ಉತ್ತರ ವಲಯ ಬಿಇಓ ಕೊಟ್ರೇಶ್‌

ದಾವಣಗೆರೆ, ಮಾ. 14- ಮಕ್ಕಳು ಬೌದ್ಧಿಕ ಶಕ್ತಿ, ಸಮಾಲೋಚನೆ, ಧೈರ್ಯ, ಸಮಯ ಪ್ರಜ್ಞೆ  ಹೇಗೆ ರೂಪಿಸಿಕೊಳ್ಳಬಹುದೆಂಬ  ವಿಷಯವಾಗಿ ಪರೀಕ್ಷೆಗೆ ಸಂಬಂಧಿಸಿದ ಸಿದ್ಧತೆಯ ಬಗ್ಗೆ ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್ ಮಾಹಿತಿ ನೀಡಿದರು.

ಅವರು ಎಲೆಬೇತೂರು ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ತರಗತಿ ಎಲ್ಲಾ ವಿಷಯದ ಪಾಠಗಳ ಮೆಲುಕು ಹಾಕಿಸುತ್ತಾ, ವಿಷಯದ  ಬೋಧನೆ ಮಾಡಿದರು.

 ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಭಯ ಮತ್ತು ಆತಂಕವು ಬೇಡವೆಂದು ತಿಳಿಸಿದರು. ಸುಮಾರು 2 ಗಂಟೆಗಳ ಕಾಲ ಸುದೀರ್ಘವಾಗಿ ಮಕ್ಕಳೊಂದಿಗೆ ವಿಷಯವನ್ನು ಚರ್ಚಿಸುತ್ತಾ ಸಮಾಲೋಚನೆ ನಡೆಸಿದರು .

ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ.  ಹಲಗಣ್ಣನವರ, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ  ಬಿ.ಎಂ. ಶಶಿಕಲಾ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published.