ಚನ್ನಗಿರಿ : ಡಿ.ಕೆ.ಶಿ., ಸಲೀಂ ಅಹ್ಮದ್ ಅವರಿಗೆ ಸ್ವಾಗತ

ಚನ್ನಗಿರಿ : ಡಿ.ಕೆ.ಶಿ., ಸಲೀಂ ಅಹ್ಮದ್ ಅವರಿಗೆ ಸ್ವಾಗತ

ಚನ್ನಗಿರಿ, ಮಾ. 14- ಈಚೆಗೆ ನಗರಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ. ಶಿವಗಂಗಾ ಹಾಗೂ ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹಸಿರು ಶಾಲು ಹಾಗೂ ಅಡಿಕೆ ಹೊಂಬಾಳೆ ನೀಡಿ  ಸ್ವಾಗ ತಿಸಿದರು. ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಭರತ್ ಪಾಟೀಲ್, ಕಿಸಾನ್ ಕಾಂಗ್ರೆಸ್ ಯುವ ಮುಖಂಡ ಇಸ್ಮಾಯಿಲ್, ಸಂಜು ಪಾಟೀಲ್, ಆಕಾಶ್ ಪಾಂಡೋಮಟ್ಟಿ ಮತ್ತಿತರರಿದ್ದರು.