ವೀರೇಶ್ ಅವಧಿಯಲ್ಲಿ ಅಭಿವೃದ್ಧಿಯಾಗಲಿ

ಮಾನ್ಯರೇ,

ದಾವಣಗೆರೆಯ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದ ವೀರೇಶ್‌ರವರು, ನನಗಿರುವುದು ಕೇವಲ 12 ತಿಂಗಳ ಅಧಿಕಾರ ಮಾತ್ರ. ಇಂತಹ ಸಮಯ ದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸವನ್ನು ಮಾಡದೇ, ಬಹು ತೇಕ ಸಮಯವನ್ನು ಅಭಿನಂದನಾ ಸಮಾರಂಭದ ನೆಪದಲ್ಲಿ ಸಾಕಷ್ಟು ಹಣ, ಶ್ರಮ ಮತ್ತು ಸಮಯ ವ್ಯರ್ಥ ಮಾಡಲು ಅವಕಾಶ ಮಾಡಿಕೊಡಬೇಡಿ. ಇದಕ್ಕೆ ಖರ್ಚು ಮಾಡುವ ಹಣದಲ್ಲಿ ನೋಟ್‌ ಪುಸ್ತಕ ಪೆನ್ನುಗಳನ್ನು ನನಗೆ ತಂದುಕೊಡಿ. ಅವುಗಳನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ವಿವಿಧ ಶಾಲಾ ಮಕ್ಕಳಿಗೆ ಹಂಚುತ್ತೇನೆ ಎಂದು ಹೇಳಿರುವುದು ನಿಜಕ್ಕೂ ಎಲ್ಲರೂ ಮೆಚ್ಚುವಂತಹದ್ದು. 

ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ವಾಟ್ಸಾಪ್ ಗುಂಪನ್ನು ಇಷ್ಟರಲ್ಲಿಯೇ ಪ್ರಾರಂಭ ಮಾಡುತ್ತೇನೆಂದು ಹೇಳಿರುವುದು ಅವರ ದೃಷ್ಟಿತ್ವ ತೋರಿಸುತ್ತದೆ. ನಮಗೆ ಇಂದು ಮಾತನಾಡುವವರು ಬೇಡ ಕೆಲಸ ಮಾಡುವವರು ಬೇಕು. 

ಇಂತಹ ಮೇಯರ್ ಅನ್ನು ಪಡೆದಿರುವುದು ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ. ಇವರ ಅವಧಿಯಲ್ಲಿ ನಗರಕ್ಕೆ ಒಳ್ಳೆಯ ಅಭಿವೃದ್ಧಿ ಕೆಲಸಗಳಾಗಲಿ ಎಂದು ಆಶಿಸುತ್ತೇನೆ.


– ಕೆ.ಸಿ. ಚನ್ನಪ್ಪ, ಪ್ರಧಾನ ಕಾರ್ಯದರ್ಶಿ, ನಾಗರಿಕ ಹಿತರಕ್ಷಣಾ ಸಮಿತಿ (ರಿ.), ಸ್ವಾಮಿ ವಿವೇಕಾನಂದ ಬಡಾವಣೆ, ದಾವಣಗೆರೆ.

Leave a Reply

Your email address will not be published.