ನಿವೇಶನ ಮಾಲೀಕರಿಗೇಕೆ ದಂಡ?

ಮಾನ್ಯರೇ,

ಮಹಾನಗರ ಪಾಲಿಕೆ ನಿವೇಶನ ಸ್ವಚ್ಚಗೊಳಿಸುವುದರ ಬಗ್ಗೆ ಹೇಳುತ್ತಿದ್ದು, ಕಸ ಇರುವ ನಿವೇಶನಗಳ ಮಾಲೀಕರಿಗೆ ದಂಡ ಹಾಕುವುದಾಗಿ ಹೇಳುತ್ತಿದೆ.

ಆದರೆ, ನಮ್ಮ ನಿವೇಶನಗಳಿಗೆ ನಮ್ಮ ಮನೆ ಕಸವನ್ನು ನಾವೇನು ಹಾಕುವುದಿಲ್ಲ. ಬದಲಾಗಿ ನಿವೇಶನದ ಆಚೀಚೆ  ಇರುವ ಸಾರ್ವಜನಿಕರು ಕಸ ಹಾಕುತ್ತಾರೆ. ಇದರಲ್ಲಿ ನಿವೇಶನದ ಮಾಲೀಕರ ತಪ್ಪೇನು? 

ಸಾರ್ವಜನಿಕರಲ್ಲಿ ತಿಳುವಳಿಕೆ ಇರಬೇಕು. ಒಂದೆರಡು ಬಾರಿ ಸ್ವಚ್ಛ ಮಾಡಿಸಬಹುದು. ಆದರೆ ಪದೇ ಪದೇ ಕಸ ಹಾಕಿದರೆ ಏನು ಮಾಡುವುದು? ಇದಕ್ಕೆ ಮಾಲೀಕರಿಗೆ ದಂಡ ವಿಧಿಸುವ ಬದಲು ಜನಜಾಗೃತಿ ಮೂಡಿಸಿ ಸ್ವಚ್ಛ ನಗರ ಮಾಡುವುದೊಂದೇ ಪರಿಹಾರ.


– ಡಾ. ಹೆಚ್. ಎಂ. ವೀರೇಂದ್ರ ಕುಮಾರ, ದಾವಣಗೆರೆ.

Leave a Reply

Your email address will not be published.