ಹೊನ್ನಾಳಿ : ಶಿವ ದೀಕ್ಷೆ ಪಡೆದವರಿಗೆ ಲೌಕಿಕ ಬದುಕಿನಲ್ಲೂ ದೈವೀ ಗುಣ

ಹೊನ್ನಾಳಿ : ಶಿವ ದೀಕ್ಷೆ ಪಡೆದವರಿಗೆ ಲೌಕಿಕ ಬದುಕಿನಲ್ಲೂ ದೈವೀ ಗುಣ

ಹೊಟ್ಯಾಪುರ ಶ್ರೀ ಗಿರಿಸಿದ್ದೇಶ್ವರ  ಸ್ವಾಮೀಜಿ

ಹೊನ್ನಾಳಿ, ಮಾ.2- ಪ್ರತಿಯೊಬ್ಬರೂ ಲಿಂಗಪೂಜೆ ಮಾಡುವ ಮೂಲಕ ತಮ್ಮ ಮನಸ್ಸನ್ನು ಅಂತರಂಗ, ಬಹಿರಂಗ ಶುದ್ಧವಾಗಿಟ್ಟುಕೊಳ್ಳುವಂತೆ ಶ್ರೀ ಹೊಟ್ಯಾಪುರ ಗಿರಿಸಿದ್ದೇಶ್ವರ  ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ರಾಂಪುರ ಕ್ಷೇತ್ರದ ಶ್ರೀ ಹಾಲಸ್ವಾಮೀಜಿಯ ಮಹಾ ರಥೋತ್ಸವದ ಅಂಗವಾಗಿ ಉಚಿತ ಶಿವದೀಕ್ಷೆ, ಹಾಲಸ್ವಾಮೀಜಿಯ ಧ್ವಜಾರೋಹಣ, ಮಹಾರಥೋತ್ಸವದ ಕಂಕಣಧಾರಣೆ ಕಾರ್ಯಕ್ರಮ ಉದ್ದೇಶಿಸಿ ಶ್ರೀಗಳು ಮಾತನಾಡಿದರು. 

ಶಿವ ದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿ ನಲ್ಲೂ ದೈವೀ ಗುಣ ಮೂಡಲಿದ್ದು, ರುದ್ರಾಕ್ಷಿ ಮಾಲೆ ಯೊಂದಿಗೆ ಲಕ್ಷಾಂತರ ವರ್ಷದ ಹಿಂದೆಯೂ ಇಷ್ಟ ಲಿಂಗಪೂಜೆ ಮಾಡಲಾಗುತ್ತಿತ್ತು ಎಂದು ಹೇಳಿದರು.

ಶ್ರೀ ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠಾಧ್ಯಕ್ಷ  ಸದ್ಗುರು ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮಾತನಾಡಿ, `ಧರ್ಮವನ್ನು ಯಾರೂ ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂಬ ಮಾತಿನಂತೆ ಆಸ್ತಿಕರಾದ ನಮ್ಮೆಲ್ಲರ ಜೀವನ ಪಾವನವಾಗಲಿದೆ ಎಂದರು. 

ಜಂಗಮ ವಟುಗಳು ಶಿವದೀಕ್ಷೆಯನ್ನು ಪಡೆಯುವ ಮೂಲಕ  ಗ್ರಾಮದ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿದರು.

Leave a Reply

Your email address will not be published.