ಹೂವಿನಹಡಗಲಿ : ವಕೀಲರ ರಕ್ಷಣೆಗೆ ಕಾಯ್ದೆ ರೂಪಿಸಲು ಮನವಿ

ಹೂವಿನಹಡಗಲಿ : ವಕೀಲರ ರಕ್ಷಣೆಗೆ ಕಾಯ್ದೆ ರೂಪಿಸಲು ಮನವಿ

ಹೂವಿನಹಡಗಲಿ, ಮಾ.2- ಕರ್ನಾಟಕದಲ್ಲಿ ವಕೀಲರ ರಕ್ಷಣೆಗಾಗಿ ವಕೀಲರ ರಕ್ಷಣೆ ಕಾಯ್ದೆಯನ್ನು ಜಾರಿಗೆ ತಂದು ವಕೀಲರ ಜೀವ, ಮಾನ, ಆಸ್ತಿಗಳನ್ನು ರಕ್ಷಿಸುವಂತೆ ಹಡಗಲಿ ನ್ಯಾಯವಾದಿಗಳ ಸಂಘವು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಇತ್ತೀಚೆಗಷ್ಟೇ ಹೊಸಪೇಟೆಯ ನ್ಯಾಯಾಲಯ ಆವರಣದಲ್ಲಿ ವಕೀಲ ವೆಂಕಟೇಶ್ ಎಂಬುವವರನ್ನು ಹಾಡುಹಗಲೇ ಹತ್ಯೆ ಮಾಡಿಲಾಗಿತ್ತು. ತೆಲಂಗಾಣದ ವಕೀಲ ದಂಪತಿಗಳಾದ ರಾಮರಾವ್ ಮತ್ತು ಅವರ ಪತ್ನಿ ಪಿ.ವಿ. ನಾಗಮಣಿ ಅವರನ್ನು ನಡು ರಸ್ತೆಯಲ್ಲಿ ಹಗಲೇ ಹತ್ಯೆ ಮಾಡಲಾಗಿತ್ತು. ಸಾಕಷ್ಟು ಇಂತಹ ಘಟನೆಗಳು ನಮ್ ಕಣ್ಮುಂದೆ ನಡೆದಿವೆ. 

ಪ್ರಜೆಗಳ ಆಸ್ತಿ, ಜೀವಗಳನ್ನು ರಕ್ಷಣೆ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡಿ ರುವ ವಕೀಲರು  ತಮ್ಮ ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಕೀಲರಿಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ. ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ಮಾಡಿದ್ದು, ಕೂಡಲೇ ವಕೀಲರ ರಕ್ಷಣೆ ಕಾಯ್ದೆಯನ್ನು ತರುವಂತೆ ಮನವಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published.